ʼಜನ ನಾಯಗನ್ʼ ಮಾತ್ರವಲ್ಲ.. ರಿಲೀಸ್‌ಗೂ ಮುನ್ನವೇ ಸೋರಿಕೆಯಾದ ಚಿತ್ರಗಳು ಹತ್ತು ಹಲವು.!
ಪ್ರತಿಯೊಬ್ಬ ಸಿನಿ ಪ್ರೇಕ್ಷಕನಿಗೆ ತನ್ನ ಮೆಚ್ಚಿನ ನಟ – ನಟಿಯರ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡುತ್ತಾ ಅವರ ಅಭಿನಯಕ್ಕೆ ಶಿಳ್ಳೆ – ಚಪ್ಪಾಳೆಗಳನ್ನು ನೀಡುವ ಅಭಿಮಾನ ಇಷ್ಟ. ಪ್ರೇಕ್ಷಕರ ಮೆಚ್ಚುಗೆ ಪಡೆಯಬೇಕೆನ್ನುವುದು ಚಿತ್ರರಂಗದ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞನ ಆಶಯ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಚಿತ್ರರಂಗಕ್ಕೆ ʼಪೈರಸಿʼ ಎನ್ನುವ ಮದ್ದಿಲ್ಲದ ಕಾಯಿಲೆ ತಟ್ಟಿರುವುದು ಅದೆಷ್ಟೋ ಸಿನಿ ನಿರ್ಮಾಣಕರಿಗೆ ತಲೆ ನೋವಾಗಿ ಕಾಡಿದೆ. ಪೈರಸಿ ಎಂಬ ಪಿಡುಗು ಈ ಸಿನಿ ಪ್ರೇಕ್ಷಕರ ಮನಂಜನಾ ಅನುಭವಕ್ಕೆ ಕುತ್ತು ತರುತ್ತಿದೆ. ಚಿತ್ರಮಂದಿರಗಳಲ್ಲಿ ಕದ್ದು ರೆಕಾರ್ಡ್ ಮಾಡುವ ಹಳೆಯ ಪದ್ಧತಿಯ ಜೊತೆಗೆ, ಈಗ ಹೈ-ಡೆಫಿನಿಷನ್ (HD) ಪ್ರತಿಗಳು ಬಿಡುಗಡೆಗೆ ವಾರಗಳ ಮುನ್ನವೇ ಅಂತರ್ಜಾಲದಲ್ಲಿ ಲಭ್ಯವಾಗುತ್ತಿರುವುದು ಚಿತ್ರೋದ್ಯಮಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸೂರ್ಯ ಅಭಿನಯದ 'ಅಯಾನ್' ಚಿತ್ರದಲ್ಲಿ ತೋರಿಸಿದಂತೆ, ಈ ಪೈರಸಿ ಹಿಂದೆ ಒಂದು ದೊಡ್ಡ ಮಾಫಿಯಾವೇ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿ ಅಥವಾ ಎಡಿಟಿಂಗ್ ಟೇಬಲ್‌ನಿಂದಲೇ ಪೂರ್ಣ ಪ್ರಮಾಣದ ಚಿತ್ರಗಳು ಸೋರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರೆ ತಪ್ಪಾಗದು. ಇದಕ್ಕೆ ತಾಜಾ ಉದಾಹರಣೆ ಎಂದರೆ ದಳಪತಿ ವಿಜಯ್ (Thalapathy Vijay) ಅಭಿನಯದ ʼಜನ ನಾಯಗನ್ʼ (Jana Nayagan). ವಿಜಯ್ ರಾಜಕೀಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಅಭಿನಯಸಿರುವ ಕೊನೆಯ ಚಿತ್ರ ʼಜನ ನಾಯಗನ್ʼ ಆರಂಭದಲ್ಲಿ ಸೆನ್ಸಾರ್ ಸಮಸ್ಯೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಚಿತ್ರ, ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆ ಆಯಿತು.
ಇದರಿಂದ ನಿರ್ಮಾಪಕರಿಗೆ ಅಪಾರ ನಷ್ಟದ ಜತೆ ಚಿತ್ರರಂಗಕ್ಕೆ ಇದು ನಿಜಕ್ಕೂ ಆಘಾತಕಾರಿ. ʼಜನ ನಾಯಗನ್ʼ ರಿಲೀಸ್‌ಗೂ ಮುನ್ನ ಇಡೀ ಚಿತ್ರವೇ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಪ್ಯಾನ್ ಇಂಡಿಯಾ ಹಾಗೂ ಸ್ಟಾರ್ ನಟನ ಸಿನಿಮಾವಾಗಿರುವುದರಿಂದ ಈ ವಿಚಾರ ಚಿತ್ರರಂಗದಲ್ಲಿ ದೊಡ್ಟಮಟ್ಟಿನಲ್ಲಿ ಸದ್ದು ಮಾಡಿದೆ. ಆದರೆ ಚಿತ್ರರಂಗದಲ್ಲಿ ರಿಲೀಸ್‌ಗೂ ಸಿನಿಮಾವೊಂದು ಸೋರಿಕೆ ಆಗಿರುವುದು ಇದೇ ಮೊದಲಲ್ಲ. ಈ ರೀತಿ ಹಲವು ಸಿನಿಮಾಗಳಿಗೆ ಆಗಿದೆ. ಯಾವೆಲ್ಲ ಸಿನಿಮಾಗಳು ರಿಲೀಸ್‌ಗೂ ಮುನ್ನವೇ ಫಸ್ಟ್ ಡೇ ಫಸ್ಟ್ ಶೋ ಮುನ್ನವೇ ಲೀಕ್ ಆಗಿವೆ ಎನ್ನುವುದರ ಒಂದು ವರದಿ ಇಲ್ಲಿದೆ..