Select Location
All Locations
State
Region
City / District
Mohammed Nalapad: ಕಾಂಗ್ರೆಸ್​ ಯುವ ನಾಯಕನಿಗೆ ಇಡಿ ಶಾಕ್​; ಮೊಹಮ್ಮದ್ ನಲಪಾಡ್ ಮನೆ ಮೇಲೆ ದಾಳಿ

Mohammed Nalapad: ಕಾಂಗ್ರೆಸ್​ ಯುವ ನಾಯಕನಿಗೆ ಇಡಿ ಶಾಕ್​; ಮೊಹಮ್ಮದ್ ನಲಪಾಡ್ ಮನೆ ಮೇಲೆ ದಾಳಿ

ಬೆಂಗಳೂರು (ಏ.20): ಬೆಳ್ಳಂ ಬೆಳಗ್ಗೆಯೇ ಕಾಂಗ್ರೆಸ್​ ಯುವ ನಾಯಕನಿಗೆ ಇಡಿ (ED) ಶಾಕ್​ ಕೊಟ್ಟಿದೆ. ಬೆಂಗಳೂರಿನಲ್ಲಿರುವ ಮೊಹಮ್ಮದ್ ನಲಪಾಡ್ (Mohammad Nalapad) ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಶೋಕ್​ ನಗರದಲ್ಲಿರುವ (Ashok Nagar) ಶಾಸಕ ಹ್ಯಾರಿಸ್ ಪುತ್ರ ನಲಪಾಡ್​​ ಮನೆಯಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಒಟ್ಟು 12 ಕಡೆಗಳಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

17 ಕಡೆ ದಾಳಿ ನಡೆಸಿ ಪರಿಶೀಲನೆ ಶಾಸಕ ಹ್ಯಾರಿಸ್ ಪುತ್ರ ಮೊಹಮದ್​ ನಲಪಾಡ್ ಮನೆಯಲ್ಲಿ ಬೆಳಗ್ಗೆಯೇ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆ 6.30 ಸುಮಾರಿಗೆ 12ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ಸಿಆರ್​ಪಿಎಫ್ ಬಂದೋಬಸ್ತ್​​ನಲ್ಲಿ ದಾಳಿ ನಡೆದಿದೆ. 17 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗ್ತಿದೆ. ಬಿಟ್ ಕಾಯಿನ್ ಸಂಬಂಧ ಇಡಿ ರೇಡ್ ಬಿಟ್ ಕಾಯಿನ್ ಸಂಬಂಧ ಇಡಿ ದಾಳಿ ನಡೆದಿದೆ ಎನ್ನಲಾಗ್ತಿದ್ದು, ನಾಲ್ಕು ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ಅಶೋಕ್​ ನಗರದ ನಿವಾಸದ ಮೇಲೆ ರೇಡ್ ಮಾಡಿದ್ದಾರೆ.

 ದಾಳಿ ನಡೆದ ವೇಳೆ ಶಾಸಕ ಹ್ಯಾರಿಸ್ ಹಾಗೂ ಮೊಹಮ್ಮದ್​ ನಲಪಾಡ್​​ ಮನೆಯಲ್ಲೇ ಇದ್ದಾರೆ ಎನ್ನಲಾಗ್ತಿದೆ. ಹ್ಯಾರಿಸ್ ಮನೆಗೆ ಸಿಆರ್​ಪಿಎಫ್ ಭದ್ರತೆ ನೀಡಲಾಗಿದ್ದು, ಹ್ಯಾರಿಸ್ ಮನೆ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ಈ ಹಿಂದೆ ಬಿಟ್ ಕಾಯಿನ್ ಹಗರಣ ತನಿಖೆ ನಡೆಸಿದ್ದ ಸಿಸಿಬಿ ಶ್ರೀಕೀ ಬಂಧಿಸಿ ವಿಚಾರಣೆ ನಡೆಸಿತ್ತು. ಬಳಿಕ ಸಿಐಡಿ ಅಧಿಕಾರಿಗಳಿಂದಲೂ ಬಿಟ್ ಕಾಯಿನ್ ಹಗರಣದ ತನಿಖೆ ನಡೆದಿದ್ದು, ನಂತರ ಸಿಸಿಬಿಯಿಂದ ಮಾಹಿತಿ ಪಡೆದು ಇಡಿ ಇಸಿಐಆರ್ ದಾಖಲು ಮಾಡಿದೆ.


News18 Kannada 1 hour ago
Home Flash News