9ನೇ ಅಂತರರಾಷ್ಟ್ರೀಯ ಶೃಂಗಸಭೆ: ಪ್ಯಾಲೆಸ್ಟೀನ್‌ನಲ್ಲಿ ಶಾಂತಿಗೆ ಒತ್ತು
ಬ್ರಸೆಲ್ಸ್, (ಬೆಲ್ಜಿಯಂ): ವೆಸ್ಟ್‌ಬ್ಯಾಂಕ್ ಹಾಗೂ ಗಾಜಾದಲ್ಲಿ ಶಾಂತಿ ಹಾಗೂ ಭದ್ರತೆ ಸ್ಥಾಪಿಸುವ ನಿಟ್ಟಿನಲ್ಲಿ ಪ್ಯಾಲೆಸ್ಟೀನ್‌ನ ಪ್ರಧಾನಿ ಮೊಹಮ್ಮದ್ ಮುಸ್ತಫಾ ಜೊತೆಗೆ ಚರ್ಚೆ ನಡೆಸಲು ಬ್ರಸೆಲ್ಸ್‌ನಲ್ಲಿ ನಡೆಯುತ್ತಿರುವ 9ನೇ ಅಂತರರಾಷ್ಟ್ರೀಯ ಶೃಂಗಸಭೆಗೆ 60 ದೇಶಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟಿವೆ. ಇರಾನ್ ಹಾಗೂ ಲೆಬನಾನ್‌ನ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ಜಾಗತಿಕವಾಗಿ ಗಮನಸೆಳೆಯುವ ನಿಟ್ಟಿನಲ್ಲಿ ಈ ಸಭೆಯು ಮಹತ್ವ ಪಡೆದುಕೊಂಡಿದೆ. ‘ಗಾಜಾದಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಹಾನಿಯು ಎರಡೂ ರಾಷ್ಟ್ರಗಳ ಪರಿಹಾರ ಸಿದ್ಧಾಂತದ ನಿರೀಕ್ಷೆಯನ್ನು ಮಸುಕಾಗಿಸಿದೆ’ ಎಂದು ಬೆಲ್ಜಿಯಂನ ವಿದೇಶಾಂಗ ಸಚಿವ ಮ್ಯಾಕ್ಸೈಮ್ ಪ್ರೆವೊಟ್ ತಿಳಿಸಿದ್ದಾರೆ.