Select Location
All Locations
State
Region
City / District
ಮೋದಿಯನ್ನು 'ಟೆರರಿಸ್ಟ್'​ ಎಂದ ಖರ್ಗೆಗೆ ಬೀದರ್​ನಲ್ಲಿ ಕಪ್ಪು ಬಿಳುಪಿನ ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ

ಮೋದಿಯನ್ನು 'ಟೆರರಿಸ್ಟ್'​ ಎಂದ ಖರ್ಗೆಗೆ ಬೀದರ್​ನಲ್ಲಿ ಕಪ್ಪು ಬಿಳುಪಿನ ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ

ಚುನಾವಣೆಯ ಕಾವು ಏರುತ್ತಿದ್ದಂತೆಯೇ ಆರೋಪ, ಪ್ರತ್ಯಾರೋಪಗಳು ಸರ್ವೇ ಸಾಮಾನ್ಯ. ಆದರೆ ಇದರ ನಡುವೆ ಕೆಲವು ರಾಜಕೀಯ ಮುಖಂಡರು, ಯಾರನ್ನೋ ಓಲೈಸುವುದಕ್ಕಾಗಿ ಅಥವಾ ತಮಗೆ ಆಗದವರನ್ನು ಹೀಯಾಳಿಸುವ ಭರದಲ್ಲಿ ನಾಲಿಗೆ ಹರಿಬಿಡುವುದು ಮಾಮೂಲು. ತಮ್ಮ ಸ್ಥಾನ ಏನು, ತಮ್ಮ ಅಧಿಕಾರ ಏನು ಎನ್ನುವುದನ್ನೂ ಮರೆತು ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡುವುದು ನಡೆದೇ ಇರುತ್ತದೆ. ಈ ಮೂಲಕ ತಮ್ಮತನವನ್ನು ತೋರಿಸಿಕೊಳ್ಳುತ್ತಾರೆ ಎಂಬ ಭಾರಿ ಆರೋಪ ಅವರ ಮೇಲೆ ಕೇಳಿಬರುತ್ತಿದ್ದರೂ ಮಾತಿನ ಮೇಲೆ ನಿಗಾ ಇಡದೇ ಅಸಭ್ಯವಾಗಿ ಮಾತನಾಡುವುದು ನಡೆದಿರುತ್ತದೆ.

ಮೊನ್ನೆಯಷ್ಟೇ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿದ ಹೇಳಿಕೆಯೊಂದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದಿದ್ದಾರೆ. ಈ ಹಿಂದೆ ಆರ್​ಎಸ್​​ಎಸ್​​ ಮತ್ತು ಬಿಜೆಪಿ ವಿಷಸರ್ಪ, ಅವರನ್ನು ಸಾಯಿಸಿ ಎಂಬ ಅರ್ಥದಲ್ಲಿ ಮುಸ್ಲಿಂ ಸಮುದಾಯಕ್ಕೆ ಕರೆ ಕೊಟ್ಟಿದ್ದ ಖರ್ಗೆ ಈಗ ಈ ಹೇಳಿಕೆ ನೀಡಿದರು. ಐಎಡಿಎಂಕೆ ಹೇಗೆ ಮೋದಿಯವರ ಜೊತೆ ಕೈಜೋಡಿಸಲು ಸಾಧ್ಯ? ಅವರು ಒಬ್ಬ ಟೆರರಿಸ್ಟ್​. ಅವರು ಸಮಾನತೆಯಲ್ಲಿ ನಂಬಿಕೆ ಇಟ್ಟಿಲ್ಲ. ಅವರ ಪಕ್ಷಕ್ಕೆ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆಯಿಲ್ಲ. ಇಂತಹವರ ಜೊತೆ ಕೈಜೋಡಿಸುವುದೆಂದರೆ ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದು ಎಂದೇ ಅರ್ಥ ಎಂದು ಹೇಳುವುದನ್ನೆಲ್ಲಾ ಹೇಳಿ, ಬಳಿಕ "ನಾನು ಭಯೋತ್ಪಾದಕ ಎಂದರೆ ಅವರು ಎಲ್ಲರನ್ನೂ ಬೆದರಿಸುತ್ತಾರೆ (Terrorises) ಎಂಬ ಅರ್ಥದಲ್ಲಿ ಹೇಳಿದ್ದೇನೆ" ಎಂದು ಸ್ಪಷ್ಟನೆ ಬೇರೆ ನೀಡಿದರು.

ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ ಆದರೆ, ಅವರ ಈ ಮಾತು ಬಿಜೆಪಿಯನ್ನು ಕೆರಳಿಸಿದೆ. ಕೆಪಿಸಿಸಿ ಅಧ್ಯಕ್ಷನ ಸ್ಥಾನದಲ್ಲಿ ಇರುವಂಥವರು ಇಂಥ ಮಾತುಗಳನ್ನಾಡುವ ಬಗ್ಗೆ ಎಲ್ಲೆಡೆ ಭಾರಿ ಟೀಕೆಗಳೂ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಇದೀಗ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್​ ಅವರು ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ. ಖರ್ಗೆ ಅವರು ಕೆಲವು ಬಾರಿ ಕಪ್ಪು ಮತ್ತು ಬಿಳುಪಿನ ಅಂದರೆ "ಟೆರರಿಸ್ಟ್​ ಮತ್ತು ಟೆರರಿಸ್ಟ್​ಗಳಿಗೇ ಟೆರರ್​ ಆಗಿರುವವರ ನಡುವೆ ವ್ಯತ್ಯಾಸವನ್ನು ಗುರುತಿಸಲು ವಿಫಲರಾಗುತ್ತಾರೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ. ಬೀದರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಅವರೂ ಉಪಸ್ಥಿತರಿದ್ದು, ಅವರ ಎದುರೇ ಉಪರಾಷ್ಟ್ರಪತಿ ಈ ಮಾತು ಹೇಳಿದರು.


Asianet News 1 hour ago
Home Flash News