Select Location
All Locations
State
Region
City / District
Mamata Banerjee Prediction: ದೀದಿ ಬಗ್ಗೆ ಸ್ಫೋಟಕ ಭವಿಷ್ಯ! ತಮಿಳುನಾಡಲ್ಲಿ ಡಿಎಂಕೆ ಜೊತೆ ಟಿವಿಕೆ ಗದ್ದುಗೆ ಏರುತ್ತಂತೆ!

Mamata Banerjee Prediction: ದೀದಿ ಬಗ್ಗೆ ಸ್ಫೋಟಕ ಭವಿಷ್ಯ! ತಮಿಳುನಾಡಲ್ಲಿ ಡಿಎಂಕೆ ಜೊತೆ ಟಿವಿಕೆ ಗದ್ದುಗೆ ಏರುತ್ತಂತೆ!

ಪ್ರಖ್ಯಾತ ಜ್ಯೋತಿಷಿ (astrologer) ಪ್ರಶಾಂತ್ ಕಿಣಿ (Prashant Kini) ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 2026ರ ಪಶ್ಚಿಮ ಬಂಗಾಳ (West Bengal) ಹಾಗೂ ತಮಿಳುನಾಡು (Tamil Nadu) ವಿಧಾನಸಭೆ ಚುನಾವಣೆ (assembly elections) ಬಗ್ಗೆ ಈ ಬಾರಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಅವರು ತಮ್ಮ X (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್‌ಗಳನ್ನು ಇದನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ತಮಿಳುನಾಡಲ್ಲಿ ಎಲೆಕ್ಷನ್ ಮುಗಿದಿದೆ. ಅತ್ತ ಪಶ್ಚಿಮ ಬಂಗಾಳದಲ್ಲಿ ಒಂದು ಹಂತದಲ್ಲಿ ಮತದಾನ ಮುಗಿದ್ದು, ಇದೇ 29ರಂದು ಮತ್ತೊಂದು ಹಂತದ ಎಲೆಕ್ಷನ್ ನಡೆಯಲಿದೆ. ಈ ನಡುವೆ ಪ್ರಶಾಂತ್ ಕಿಣಿ ಎರಡೂ ರಾಜ್ಯಗಳ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ ಕುರಿತಂತೆ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದ್ದಾರೆ. ಈ ಹಿಂದೆ 2023ರಲ್ಲಿ ಮಮತಾ ಬ್ಯಾನರ್ಜಿ ಬಗ್ಗೆ ಅವರು ಹೇಳಿದ್ದ ಭವಿಷ್ಯದ ಪೋಸ್ಟ್ ಅನ್ನು ರಿ-ಶೇರ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ನನ್ನ ಭವಿಷ್ಯವಾಣಿ, ಫೆಬ್ರವರಿ 2024ರವರೆಗೆ ಅವರಿಗೆ ಒಳ್ಳೆಯದಲ್ಲ, ಮಾರ್ಚ್ 2024 ರಿಂದ ಏಪ್ರಿಲ್ 2026 ರವರೆಗೆ ತುಂಬಾ ಒಳ್ಳೆಯ ಸಮಯ, ಟಿಎಂಸಿ 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ ಎಂದಿದ್ದರು. ಮುಂದುವರೆದು ಮಮತಾ ಬ್ಯಾನರ್ಜಿಯವರು 2026 ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಅಂತ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಗ್ಗೆ ನನ್ನ ಭವಿಷ್ಯ. ಮಮತಾ ಬ್ಯಾನರ್ಜಿ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ. ಅವರು 2026 ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಅಂತ ಪ್ರಶಾಂತ್ ಕಿಣಿ ಹೇಳಿದ್ದಾರೆ. ಬಂಗಾಳದಲ್ಲಿ ಉನ್ನತ ಮತದಾನವಾಗಿದೆ, ಮಮತಾ ಬ್ಯಾನರ್ಜಿ ಕುಸಿತವಾಗುತ್ತಿದ್ದಾರೆ ಎಂದು ಸೂಚಿಸಿ, “ಫಲಿತಾಂಶಗಳು ಭಾರತವನ್ನೇ ಆಶ್ಚರ್ಯಗೊಳಿಸುತ್ತವೆ” ಎಂದು ಬರೆದಿದ್ದಾರೆ. ಇನ್ನು ತಮಿಳುನಾಜಡು ಚುನಾವಣೆ ಬಗ್ಗೆಯೂ ಪ್ರಶಾಂತ್ ಕಿಣಿ ಬರೆದಿದ್ದಾರೆ. 2026ರಲ್ಲಿ DMK ಮತ್ತೆ ಗೆಲ್ಲುತ್ತದೆ, ಆದರೆ ಮತಗಳು ಮತ್ತು ಸೀಟುಗಳು ತೀವ್ರವಾಗಿ ಕುಸಿಯುತ್ತವೆ. ಎಂ.ಕೆ. ಸ್ಟಾಲಿನ್ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಮೈತ್ರಿ ಸರ್ಕಾರ ಅಥವಾ ಅನಿರೀಕ್ಷಿತ ಪಕ್ಷದಿಂದ ಬಾಹ್ಯ ಬೆಂಬಲ ಬರುತ್ತದೆ ಎಂದಿದ್ದಾರೆ.


News18 Kannada 1 hour ago
Home Flash News