Achievement: 35 ವರ್ಷ ಕಾದಿಟ್ಟ ಖಜಾನೆ; BSNL ಅಜ್ಜನ ಬಳಿ 1000ಕ್ಕೂ ಹೆಚ್ಚು ಅಪರೂಪದ ನಾಣ್ಯ, ಏನೆಲ್ಲಾ ವಿಶೇಷ ಇದೆ ಗೊತ್ತಾ?
ಮೈಸೂರು: ಒಂದು ಹವ್ಯಾಸ (Hobby) ಇತಿಹಾಸ ಸೃಷ್ಟಿಸಬಹುದು ಎಂದು ನಂಬುತ್ತೀರಾ? ಹಾಗಾದರೆ ಮೈಸೂರಿನ 72 ವರ್ಷದ ಕೇಶವಮೂರ್ತಿ ಅವರ ಕಥೆ ಕೇಳಿ! BSNL ನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ (Retired) ಇವರು ಕಳೆದ ಬರೋಬ್ಬರಿ 35 ವರ್ಷಗಳಿಂದ ಕಾಪಾಡಿಕೊಂಡು ಬಂದ ಅಪರೂಪದ ಖಜಾನೆ ಈಗ ಜಗಜ್ಜಾಹೀರಾಗಿದೆ!
ಕೇಶವಮೂರ್ತಿ ಅವರ ಬಳಿ ಇದೆ 1000ಕ್ಕೂ ಹೆಚ್ಚು ದೇಶ-ವಿದೇಶಗಳ ಅಪರೂಪದ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ವಿಶಾಲ ಸಂಗ್ರಹ. ಬ್ರಿಟಿಷ್ ಕಾಲದ ನಾಣ್ಯಗಳು, ಸ್ವಾತಂತ್ರ್ಯಕ್ಕೂ ಮುನ್ನ ಚಲಾವಣೆಯಲ್ಲಿದ್ದ ಕರೆನ್ಸಿಗಳು... ಇತಿಹಾಸವನ್ನೇ ಕಣ್ಣಿಗೆ ಕಟ್ಟುವಂತಹ ಅಮೂಲ್ಯ ವಸ್ತುಗಳು ಇವರ ಸಂಗ್ರಹದಲ್ಲಿವೆ. ಕೇವಲ ಸಂಗ್ರಹಿಸುವುದಷ್ಟೇ ಅಲ್ಲ, ವಿದ್ಯಾರ್ಥಿಗಳಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸಲು ಶಾಲಾ-ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ 175ಕ್ಕೂ ಹೆಚ್ಚು ಪ್ರದರ್ಶನ ಮಾಡಿದ್ದಾರೆ!