Select Location
All Locations
State
Region
City / District
ಕೇರಳಂ ಕಾಂಗ್ರೆಸ್ ಹಸ್ತಕ್ಕೆ ಅಧಿಕಾರ: ಯಾರಿಗೆ ಸಿಗುತ್ತೆ ಮುಖ್ಯಮಂತ್ರಿ ಪಟ್ಟ ?

ಕೇರಳಂ ಕಾಂಗ್ರೆಸ್ ಹಸ್ತಕ್ಕೆ ಅಧಿಕಾರ: ಯಾರಿಗೆ ಸಿಗುತ್ತೆ ಮುಖ್ಯಮಂತ್ರಿ ಪಟ್ಟ ?

ತಿರುವನಂತಪುರಂ: ಬರೋಬ್ಬರಿ ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಅಧಿಕಾರ ಸಾಧಿಸಿದಂತಾಗಿದೆ. ಆದರೆ ಈಗ ಎಲ್ಲರ ಕಣ್ಣು "ಕೇರಳದ ಮುಂದಿನ ಸಾರಥಿ ಯಾರು?" ಎನ್ನುವುದರ ಮೇಲೆ ನೆಟ್ಟಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಸದ್ಯ ಮೂವರು ಘಟಾನುಘಟಿ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಈ ರೇಸ್‌ನಲ್ಲಿರುವ ಪ್ರಮುಖರು. ವಿಶೇಷವೆಂದರೆ ಈ ಮೂವರೂ ನಾಯಕರು ಕೇರಳದ ಪ್ರಭಾವಿ 'ನಾಯರ್' ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಕೆ.ಸಿ. ವೇಣುಗೋಪಾಲ್ 63 ವರ್ಷದ ಕೆ.ಸಿ. ವೇಣುಗೋಪಾಲ್ ಅವರು ಹೈಕಮಾಂಡ್ ಮಟ್ಟದಲ್ಲಿ ಹೆಚ್ಚು ಪ್ರಭಾವ ಹೊಂದಿದ್ದಾರೆ. ಇವರು ರಾಹುಲ್ ಗಾಂಧಿ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಚುನಾವಣೆಯ ಸಮಯದಲ್ಲಿ ಅಸಮಾಧಾನಿತ ನಾಯಕರನ್ನು ಸಮಾಧಾನಪಡಿಸಿ ಪಕ್ಷವನ್ನು ಒಗ್ಗಟ್ಟಿನಿಂದ ಮುನ್ನಡೆಸುವಲ್ಲಿ ಇವರು ಯಶಸ್ವಿಯಾಗಿದ್ದರು. ಸದ್ಯ ಲೋಕಸಭಾ ಸಂಸದರಾಗಿರುವ ಇವರು ಕೇರಳ ರಾಜಕಾರಣಕ್ಕೆ ಮರಳಿದರೆ, ದೆಹಲಿಯ ಕಾಂಗ್ರೆಸ್ ಸಂಘಟನೆಯಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ವಿ.ಡಿ. ಸತೀಶನ್ 62 ವರ್ಷದ ವಿ.ಡಿ. ಸತೀಶನ್ ಅವರು ಕಳೆದ ಐದು ವರ್ಷಗಳಿಂದ ಪ್ರತಿಪಕ್ಷ ನಾಯಕರಾಗಿ ಪಿಣರಾಯಿ ವಿಜಯನ್ ಸರ್ಕಾರವನ್ನು ಸದನದ ಒಳಗೆ ಮತ್ತು ಹೊರಗೆ ಸಮರ್ಥವಾಗಿ ಎದುರಿಸಿದ್ದಾರೆ. ನೆಹರೂ ಸಿದ್ಧಾಂತದಲ್ಲಿ ಅಪಾರ ನಂಬಿಕೆ ಹೊಂದಿರುವ ಇವರು ತಮ್ಮ ರಾಜಕಾರಣದಿಂದಾಗಿ ಯುವಜನರಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಇವರೇ ಮುಖ್ಯಮಂತ್ರಿ ಪಟ್ಟಕ್ಕೆ ಪ್ರಬಲ ಅಭ್ಯರ್ಥಿ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಸಮುದಾಯದ ಬೆಂಬಲದ ವಿಷಯದಲ್ಲಿ ಚೆನ್ನಿತ್ತಲ ಅವರಿಗಿಂತ ಸ್ವಲ್ಪ ಹಿಂದೆ ಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


Udayavani 1 hour ago
Home Flash News