Select Location
All Locations
State
Region
City / District
ಮೋದಿ ಸರ್ಕಾರ ದೇಶದ ಹಿತಾಸಕ್ತಿ ಬದಿಗಿಟ್ಟು ವಿದೇಶಿ ಶಕ್ತಿಗಳ ಪರ ಕೆಲಸ ಮಾಡುತ್ತಿದೆ: ರಾಹುಲ್

ಮೋದಿ ಸರ್ಕಾರ ದೇಶದ ಹಿತಾಸಕ್ತಿ ಬದಿಗಿಟ್ಟು ವಿದೇಶಿ ಶಕ್ತಿಗಳ ಪರ ಕೆಲಸ ಮಾಡುತ್ತಿದೆ: ರಾಹುಲ್

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಆಂತರಿಕ ಆದ್ಯತೆಗಳನ್ನು ಬದಿಗಿಟ್ಟು ವಿದೇಶಿ ಹಿತಾಸಕ್ತಿಗಳ ಪರವಾಗಿ ಕೆಲಸ ಮಾಡುತ್ತಿದೆ ಮತ್ತು ದೇಶದ ಪ್ರಮುಖ ಸಾಮಾಜಿಕ-ಆರ್ಥಿಕ ರಕ್ಷಣಾ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರಾಖಂಡ್‌ನ ಆಲ್ಮೋರಾದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪರಿವರ್ತನ್ ಕಾ ಶಂಖನಾದ್' ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಅವರು ದೂರವಾಣಿ(ಫೋನ್ ಕಾಲ್) ಮೂಲಕ ಮಾತನಾಡಿದರು. ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಗಮ್ಯಸ್ಥಾನ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅವರು ಪಂತನಗರ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಬೇಕಾಯಿತು. 

ಆ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುಮಾರಿ ಶೆಲ್ಜಾ ಅವರ ಸಹಾಯದಿಂದ ಫೋನ್ ಕಾಲ್ ಮೂಲಕ ರಾಹುಲ್ ಅವರ ಭಾಷಣವನ್ನು ಜನರಿಗೆ ತಲುಪಿಸಿದರು. ರೈತರು, ಸಣ್ಣ ಉದ್ಯಮಗಳ ನಾಶ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸಲು ಕಾಂಗ್ರೆಸ್ ಪಕ್ಷವು ನಿರ್ಮಿಸಿದ್ದ ಆರ್ಥಿಕ ಬುನಾದಿಯನ್ನೇ ಧ್ವಂಸಗೊಳಿಸಿದೆ. ನೋಟು ಅಮಾನ್ಯೀಕರಣವು ತುರ್ತು ಪರಿಸ್ಥಿತಿಗಾಗಿ ಮನೆಯಲ್ಲಿ ಇಟ್ಟಿದ್ದ ಹಣವನ್ನು ಕಿತ್ತುಕೊಂಡರೆ, ಜಿಎಸ್‌ಟಿ ದೇಶದಾದ್ಯಂತ ಸಣ್ಣ ಉದ್ಯಮಗಳನ್ನು ನಾಶಪಡಿಸಿದೆ. ಜವಳಿ ಮತ್ತು ಆಹಾರ ಸಂಸ್ಕರಣಾ ವಲಯದ ಸಣ್ಣ ಉದ್ಯಮಿಗಳು ಜಿಎಸ್‌ಟಿಯಿಂದ ತತ್ತರಿಸಿದ್ದಾರೆ. ರೈತರ ಕೃಷಿ ರಕ್ಷಣಾ ವ್ಯವಸ್ಥೆಯನ್ನು ಸರ್ಕಾರ ದುರ್ಬಲಗೊಳಿಸಿದೆ" ಎಂದು ದೂರಿದರು.


Udayavani 1 hour ago
Home Flash News