Select Location
All Locations
State
Region
City / District
Arunachal Pradesh: ಮೊಬೈಲ್ ನೆಟ್‌ವರ್ಕ್ ಬಲವರ್ಧನೆ: ಭಾರತೀಯ ಸೇನೆ-ಏರ್‌ಟೆಲ್ ನಡುವೆ ಒಪ್ಪಂದ

Arunachal Pradesh: ಮೊಬೈಲ್ ನೆಟ್‌ವರ್ಕ್ ಬಲವರ್ಧನೆ: ಭಾರತೀಯ ಸೇನೆ-ಏರ್‌ಟೆಲ್ ನಡುವೆ ಒಪ್ಪಂದ

ಇಟಾನಗರ: ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖವಾಗಿರುವ ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಡಿಜಿಟಲ್ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ಹಾಗೂ ಪ್ರಮುಖ ದೂರಸಂಪರ್ಕ ಸಂಸ್ಥೆ 'ಭಾರ್ತಿ ಏರ್‌ಟೆಲ್' ಐತಿಹಾಸಿಕ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ (West Kameng) ಜಿಲ್ಲೆಯ ಅತ್ಯಂತ ದುರ್ಗಮ ಹಾಗೂ ಗಡಿ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಮೂಲಸೌಕರ್ಯವನ್ನು ವಿಸ್ತರಿಸಲು ಈ ಜಂಟಿ ಯೋಜನೆ ರೂಪಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಗಡಿಭಾಗದ ಈ ಆಯಕಟ್ಟಿನ ಪ್ರದೇಶಗಳಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸರಿಯಾದ ಮೊಬೈಲ್ ಸಂಪರ್ಕವಿಲ್ಲದೆ ಜನಸಾಮಾನ್ಯರು ಪರದಾಡುತ್ತಿದ್ದರು. "ಮಿಲಿಟರಿ ಮತ್ತು ನಾಗರಿಕ ವಲಯದ ಸಮನ್ವಯದ (Military-Civil Integration) ಮೂಲಕ ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಈ ಜಂಟಿ ಉಪಕ್ರಮವು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ," ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಯೋಜನೆಯಿಂದಾಗಿ ಗಡಿ ಭಾಗದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳು, ಡಿಜಿಟಲ್ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಹಣಕಾಸು ಒಳಗೊಳ್ಳುವಿಕೆ ಸೇರಿದಂತೆ ಅಗತ್ಯ ಸೇವೆಗಳು ಸುಲಭವಾಗಿ ತಲುಪಲಿವೆ.


Udayavani 1 hour ago
Home Flash News