Select Location
All Locations
State
Region
City / District
ಡಾಲಿ ಧನಂಜಯ್ ನಟನೆಯ ‘ಮದರ್ ಪ್ರಾಮಿಸ್’ ವೀಕ್ಷಿಸಿ ಶಿವಣ್ಣ ಹೇಳಿದ್ದಿಷ್ಟು...

ಡಾಲಿ ಧನಂಜಯ್ ನಟನೆಯ ‘ಮದರ್ ಪ್ರಾಮಿಸ್’ ವೀಕ್ಷಿಸಿ ಶಿವಣ್ಣ ಹೇಳಿದ್ದಿಷ್ಟು...

ಡಾಲಿ ಧನಂಜಯ್ ನಟನೆಯ ಮದರ್ ಪ್ರಾಮಿಸ್ ಸಿನಿಮಾವು ಜುಲೈ 10ರಂದು ಬಿಡುಗಡೆಯಾಗಿದೆ. ಹಾಸ್ಯ ಮತ್ತು ಕ್ರೈಮ್ ಥ್ರಿಲ್ಲರ್ ಕಥೆ ಒಳಗೊಂಡಿರುವ ಮದಾರ್ ಪ್ರಾಮಿಸ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿರುವ ಶಿವರಾಜ್‌ಕುಮಾರ್‌, ‘ಮದರ್ ಪ್ರಾಮಿಸ್ ಸಿನಿಮಾ ಉತ್ತಮ ಸಿನಿಮಾಗಳಲ್ಲಿ ಒಂದಾಗಿದೆ. ಎಷ್ಟೇ ಒಳ್ಳೆಯ ಚಿತ್ರಗಳು ಬಂದರೂ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಬೆಂಬಲ ನೀಡಿದರೆ ಮಾತ್ರ ಉಳಿಯಲು ಸಾಧ್ಯ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಡಾಲಿ ಅವರ ನಿರ್ಮಾಣ ಸಂಸ್ಥೆಯಾದ ‘ಡಾಲಿ ಪಿಕ್ಚರ್ಸ್’ ಅನ್ನು ಹೊಗಳುತ್ತಾ, ‘ ಡಾಲಿ ಧನಂಜಯ್ ಅವರು ತ‌ಮ್ಮದೇ ಆದ ಸಿನಿಮಾ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಾ ಬರುತ್ತಿದ್ದಾರೆ. ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂಬುದು ನನ್ನ ಆಶಯ’ ಎಂದು ಶಿವಣ್ಣ ಸಿನಿಮಾ ಕುರಿತು ಹೇಳಿಕೊಂಡಿದ್ದಾರೆ. ಪೂರ್ಣಚಂದ್ರ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಿದೆ. 'ಮದರ್ ಪ್ರಾಮಿಸ್' ಚಿತ್ರದಲ್ಲಿ ಧನಂಜಯ್, ರಂಗಭೂಮಿ ಕಲಾವಿದ ಯಶವಂತ್‌ ಶೆಟ್ಟಿ ಸೇರಿ ಅನೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಸಿನಿಮಾದ 'ನೀನೇ ಬೇಕು ಅಮ್ಮ', 'ವೇನಿ ವೀಡಿ ವೀಚಿ' ಹಾಗೂ 'ರಗಸದಅ' ಹಾಡುಗಳು ಸದ್ದು ಮಾಡುತ್ತಿವೆ.


Prajavani 1 hour ago
Home Flash News