Select Location
All Locations
State
Region
City / District
ಸಿನಿ ಸಿಪ್‌: ಯಾಕೀ ಶೂಟಿಂಗ್ ನಿಧಾನ?

ಸಿನಿ ಸಿಪ್‌: ಯಾಕೀ ಶೂಟಿಂಗ್ ನಿಧಾನ?

ಸುಮಾರು ಒಂದು ದಶಕದ ಅವಧಿಯಲ್ಲಿ ಯಶ್ ಅಭಿನಯಿಸಿರುವ ಮೂರು ಚಿತ್ರಗಳು ಬಂದಿವೆ; 'ಕೆಜಿಎಫ್', 'ಕೆಜಿಎಫ್-2' ಹಾಗೂ ಇದೀಗ 'ಟಾಕ್ಸಿಕ್'. ಇಂತಹ ಚಿತ್ರಗಳ ನಿರ್ಮಾಣ ಯಾಕೆ ಇಷ್ಟು ವಿಳಂಬ ಆಗುತ್ತಿದೆ ಎನ್ನುವ ಪ್ರಶ್ನೆ ಮುಂಚೂಣಿಯಲ್ಲಿದೆ. ತಾರಾನಟರು ವರ್ಷಪೂರ್ತಿ ಚಿತ್ರಮಂದಿರಗಳಿಗೆ ಸಿನಿಮಾಗಳನ್ನು ಒದಗಿಸದ ಕಾರಣ ಕನ್ನಡ ಚಿತ್ರೋದ್ಯಮವೇ ಸೊರಗಿದೆ ಎಂಬುದು ಒಂದು ವಾದ. ಜನರು ಚಿತ್ರಮಂದಿರದ ಕಡೆಗೆ ತಲೆಹಾಕುವುದು ಕಡಿಮೆಯಾಗಿದೆ ಎನ್ನುವುದು ಇನ್ನೊಂದು ವಾದ. ಆದರೆ, ಈ ಎಲ್ಲ ವಾದಗಳನ್ನೂ ಬದಿಗೆ ಸರಿಸುವಷ್ಟು ಕಾತರವನ್ನು 'ಟಾಕ್ಸಿಕ್' ಹುಟ್ಟುಹಾಕಿದೆ. ಅದರ ದುಬಾರಿ ದರದ ಟಿಕೆಟ್ ಗಳಿಗೂ ವಿಪರೀತ ಬೇಡಿಕೆ ಬಂದಿರುವುದು ಜನರ ನಿರೀಕ್ಷೆ ಎಷ್ಟಿದೆ ಎನ್ನುವುದನ್ನು ಖಾತರಿಪಡಿಸಿದೆ.

ದೀರ್ಘಾವಧಿ ಸಿನಿಮಾ ಮಾಡುವುದು ವರ್ತಮಾನದ ಶೈಲಿಯಾಗಿದೆಯೇ ಎನ್ನುವ ಇನ್ನೊಂದು ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ, 'ಇಲ್ಲ' ಎನ್ನುವುದೇ ಆಗಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ಒಡಿಸ್ಸಿ' ಇತ್ತೀಚೆಗೆ ತೆರೆಕಂಡು, ರಾಜ್ಯದಲ್ಲೇ ₹60 ಕೋಟಿಗೂ ಹೆಚ್ಚು ಆದಾಯ ಕಂಡಿತು. ₹2,390 ಕೋಟಿಗೂ ಹೆಚ್ಚಿನ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಚಿತ್ರೀಕರಣ ಕೇವಲ ಮೂರು ತಿಂಗಳಲ್ಲೇ ಮುಗಿದಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಪೂರ್ಣ ಚಿತ್ರೀಕರಣ ಮುಗಿಸಿ, ಒಂದು ವರ್ಷದ ನಂತರ ಚಿತ್ರ ತೆರೆಕಂಡಿತು.


Prajavani 2 hours ago
Home Flash News