ಬಾಲಯ್ಯ - ಗೋಪಿಚಂದ್ ಚಿತ್ರಕ್ಕೆ ʼದಾದಾʼ ಟೈಟಲ್; ಗ್ಲಿಂಪ್ಸ್ ನೋಡಿ ಫ್ಯಾನ್ಸ್ ಫಿದಾ
ಹೈದರಾಬಾದ್: ಟಾಲಿವುಡ್ ದಿಗ್ಗಜ ನಂದಮೂರಿ ಬಾಲಕೃಷ್ಣ (Nandamuri Balakrishna) - ನಿರ್ದೇಶಕ ಗೋಪಿಚಂದ್ ಮಲಿನೇನಿ (Gopichand Malineni) ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ‘ವೀರಾ ಸಿಂಹ ರೆಡ್ಡಿ' ಬಳಿಕ ಬಾಲಯ್ಯ ಜತೆಗೆ ಮತ್ತೆ ಗೋಪಿಚಂದ್ ಕೈಜೋಡಿಸುತ್ತಿದ್ದು, ಈ ಮಾಸ್ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ರೆಟ್ರೋ & ಪಕ್ಕಾ ಮಾಸ್ ಅವತಾರದ ಗ್ಲಿಂಪ್ಸ್ ರಿಲೀಸ್ ಮಾಡಿ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಈ ಪ್ರಾಜೆಕ್ಟ್‌ಗೆ ʼದಾದಾʼ (Dada Movie) ಎನ್ನುವ ಟೈಟಲ್ ಇಡಲಾಗಿದೆ. ಇದನ್ನೂ ಓದಿ: Renukaswamy Case: ಪವಿತ್ರಾ ಗೌಡಗೆ ರಿಲೀಫ್; ಕೇಳಿದ್ದ ಬೇಡಿಕೆಗೆ ಒಪ್ಪಿದ ಕೋರ್ಟ್ ʼಈ ಊರಿನಲ್ಲಿ ಅವನ ಹೆಸರು ಹೇಳುವುದು ಕೂಡ ಧೈರ್ಯದ ಕೆಲಸ..ʼ ಎಂದು ಹಿಂದಿಯಲ್ಲಿ ಗ್ಲಿಂಪ್ಸ್ ಶುರುವಾಗಿದೆ. ಆ ಬಳಿಕ ಪೊಲೀಸ್ ಠಾಣೆಯಲ್ಲಿ ʼನಿನ್ನ ಎದೆಗೆ ಗುಂಡು ಹೊಡೆಯುತ್ತೇವೆʼ ಎನ್ನುವ ಡೈಲಾಗ್ ಇದೆ. ಇದಾದ ಬಳಿಕ ಟೇಬಲ್ ಮೇಲೆ ಕಾಲಿಟ್ಟು ಖಾಕಿಗಳಿಗೆ ಬೆದರಿಕೆ ಹಾಕುವ ಹೀರೋ ಲುಕ್‌ನಲ್ಲಿ ಬಾಲಯ್ಯ ಅಬ್ಬರಿಸಿದ್ದಾರೆ. 80ರ ದಶಕದಲ್ಲಿ ಮುಂಬಯಿನಲ್ಲಿ ನಡೆಯುವ ಆ್ಯಕ್ಷನ್ ಡ್ರಾಮಾ ಕಥೆ ಇದಾಗಿದ್ದು, ರೆಟ್ರೋ ಶೈಲಿನಲ್ಲಿ ಗ್ಲಿಂಪ್ಸ್ ತೋರಿಸಲಾಗಿದೆ.