ಅಮೆರಿಕ, ಮಾರ್ಚ್ 14: ಅಮೆರಿಕದ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಲ್ಲಾಸ್ಗೆ ತೆರಳಬೇಕಿದ್ದ ಅಮೆರಿಕನ್ ಏರ್ಲೈನ್ಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೊಗೆ ಮುಗಿಲೆತ್ತರಕ್ಕೆ ಚಿಮ್ಮಿತ್ತು. ಆರು ಸಿಬ್ಬಂದಿ ಸೇರಿ 178 ಪ್ರಯಾಣಿಕರಿದ್ದರು. ಅಮೆರಿಕನ್ ಏರ್ಲೈನ್ಸ್ ನ ಬೋಯಿಂಗ್ 737-800 ವಿಮಾನ ಸಂಖ್ಯೆ 1006, ಕೊಲೊರಾಡೋ ಸ್ಪ್ರಿಂಗ್ಸ್ ನಿಂದ ಹೊರಟು ಡಲ್ಲಾಸ್ ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ವಿಮಾನವನ್ನು ಡೆನ್ವರ್ ಗೆ ತಿರುಗಿಸಲಾಯಿತು ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.
ಅಮೆರಿಕದ ಏರ್ಪೋರ್ಟ್ನಲ್ಲಿ 176 ಪ್ರಯಾಣಿಕರಿದ್ದ ವಿಮಾನದಲ್ಲಿ ಅಗ್ನಿ ಅವಘಡ
Source : Smacy News
19 hours ago