ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಭರ್ಜರಿ ಸಕ್ಸಸ್ ಕಂಡಿದೆ. ಇದರ ಮೂರನೇ ಪಾರ್ಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ‘ಪುಷ್ಪ 3’ ಬರುವ ಬಗ್ಗೆ ನಿರ್ಮಾಪಕ ರವಿ ಶಂಕರ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಸದ್ಯ ಅಲ್ಲು ಅರ್ಜುನ್ (Allu Arjun) ಅವರು ಅಟ್ಲಿ ಹಾಗೂ ತ್ರಿವಿಕ್ರಮ್ ಜೊತೆ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಈ ಎರಡು ಚಿತ್ರಗಳು ಪೂರ್ಣಗೊಳ್ಳಲು 2 ವರ್ಷಗಳು ಬೇಕಿದೆ. ಇದರ ಬಳಿಕವೇ ‘ಪುಷ್ಪ 3’ ಅನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಇತ್ತ ಡೈರೆಕ್ಟರ್ ಸುಕುಮಾರ್ ರಾಮ್ ಚರಣ್ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಪ್ರಾಜೆಕ್ಟ್ ಕೂಡ ಪೂರ್ಣಗೊಳ್ಳಲು 2 ವರ್ಷಗಳು ಬೇಕಿದೆ. ಮುಂದಿನ 3 ವರ್ಷಗಳಲ್ಲಿ ಸಿನಿಮಾ ಸೆಟ್ಟೇರುತ್ತದೆ. ಈ ವಿಚಾರ ಕೇಳಿದ ಬಳಿಕ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನೂ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದರು. ಫಹಾದ್ ಫಾಸಿಲ್ ವಿಲನ್ ಆಗಿ ಅಬ್ಬರಿಸಿದ್ದರು. ಪಾರ್ಟ್ 3ರಲ್ಲೂ ಫಹಾದ್ ಹವಾ ಮುಂದುವರೆಯಲಿದೆ. ‘ಪುಷ್ಪ 2’ನಲ್ಲಿ ರಕ್ತಚಂದನ ಕಳ್ಳಸಾಗಣೆಯಲ್ಲಿ ದೊಡ್ಡ ಡಾನ್ ಆಗಿ ಪುಷ್ಪರಾಜ್ ಬೆಳೆದಿದ್ದಾರೆ. ಶ್ರೀವಲ್ಲಿಗಾಗಿ ಸಿಎಂ ಅನ್ನೇ ಬದಲಿಸುವಷ್ಟು ಹಣ, ತಾಕತ್ತು ಪುಷ್ಪರಾಜ್‌ಗೆ ಇದೆ. ವಿಲನ್‌ಗೂ ಪುಷ್ಪರಾಜ್‌ಗೂ ನಡುವಿನ ಜಿದ್ದಾಜಿದ್ದಿಯಲ್ಲಿ 3ನೇ ಭಾಗ ಬರುವ ಬಗ್ಗೆ ಚಿತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿರುವಾಗ ‘ಪುಷ್ಪ 3’ ಚಿತ್ರವು 2028ರಲ್ಲಿ ನಿರೀಕ್ಷಿಸಬಹುದು ಎಂದು ನಿರ್ಮಾಪಕ ತಿಳಿಸಿದ್ದಾರೆ.
ಫ್ಯಾನ್ಸ್‌ಗೆ ಸಿಹಿಸುದ್ದಿ- ಅಲ್ಲು ಅರ್ಜುನ್ ನಟನೆಯ ‘ಪುಷ್ಪ 3’ ಬಗ್ಗೆ ಸಿಕ್ತು ಬಿಗ್ ನ್ಯೂಸ್
Source : Smacy News
16 hours ago