ಗಗನಯಾತ್ರಿಗಳ ಜೀವನ ಸುಲಭವಲ್ಲ, ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಸುನೀತಾ ವಿಲಿಯಮ್ಸ್ ಕೂಡ ಅನಿರೀಕ್ಷಿತವಾಗಿ ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯಬೇಕಾಯಿತು. ಸುನೀತಾ ವಿಲಿಯಮ್ಸ್ ಮಾತ್ರವಲ್ಲ ಈ ರೀತಿ ಬಾಹ್ಯಾಕಾಶಕ್ಕೆ ಹೋಗಿರುವಂತಹ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಯಾವ ರೀತಿ ನಿರ್ವಹಿಸುತ್ತಾರೆ? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಬಾಹ್ಯಾಕಾಶ (Space) ದಲ್ಲಿ ಒಂಬತ್ತು ತಿಂಗಳು ಕಳೆದ ನಂತರ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬ್ಯಾರಿ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ. ಅವರು 9 ತಿಂಗಳು, 13 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅಷ್ಟಕ್ಕೂ ಗಗನಯಾತ್ರಿಗಳ ಜೀವನ ಸುಲಭವಲ್ಲ, ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಸುನೀತಾ ವಿಲಿಯಮ್ಸ್ ಕೂಡ ಅನಿರೀಕ್ಷಿತವಾಗಿ ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯಬೇಕಾಯಿತು. ಆದರೆ ಬಾಹ್ಯಾಕಾಶದಲ್ಲಿ ಒಂದು ಹನಿ ನೀರು ಸಹ ಗಾಳಿಯಲ್ಲಿ ತೇಲುತ್ತಿರುವಂತೆ ತೋರುವಾಗ, ಮುಟ್ಟಿನ ಸಮಯದಲ್ಲಿ ದೇಹದಿಂದ ಹರಿಯುವ ರಕ್ತಕ್ಕೆ ಏನಾಗುತ್ತದೆ? ಶೂನ್ಯ ಗುರುತ್ವಾಕರ್ಷಣೆಯಲ್ಲಿ ಋತುಚಕ್ರವನ್ನು ಹೇಗೆ ನಿರ್ವಹಿಸಲಾಗುತ್ತದೆ? ಎಂಬ ಪ್ರಶ್ನೆ ಮೂಡುವುದು ಸಹಜ. ಇಂತಹ ಅನುಮಾನಗಳಿಗೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ ಮಹಿಳಾ ಗಗನಯಾತ್ರಿ ರಿಯಾ ಮಾಧ್ಯಮ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಆ ಮಾಹಿತಿಯನ್ನಾಧರಿಸಿ ಟೈಮ್ಸ್ ಆಫ್ ಇಂಡಿಯಾ ಇಂತಹ ಕುತೂಹಲಕಾರಿ ವಿಷಯಗಳಿಗೆ ಉತ್ತರ ನೀಡಿದೆ. ಋತುಚಕ್ರ ಸಮಸ್ಯೆಗೆ ಎರಡು ಆಯ್ಕೆ!ವ್ಯಾಲೆಂಟಿನಾ ಟೆರೆಶ್ಕೋವಾ ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳೆ. ಅವರು 1963 ರಲ್ಲಿ ತಮ್ಮ ಮೊದಲ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶಕ್ಕೆ ಹೋದರು. ಅಂದಿನಿಂದ, 99 ಮಹಿಳೆಯರು ವಿವಿಧ ಕಾರ್ಯಾಚರಣೆಗಳಿಗೆ ಬಾಹ್ಯಾಕಾಶಕ್ಕೆ ಹೋಗಿದ್ದಾರೆ. ಈ ರೀತಿ ಹೋಗುವ ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಎರಡು ಆಯ್ಕೆಗಳು ಇರುತ್ತವೆ. ಮೊದಲನೆಯದು ಬಾಹ್ಯಾಕಾಶದಲ್ಲಿ ಋತುಚಕ್ರ ಆಗಲು ಬಿಡುವಂತದ್ದು. ಅಂದರೆ ಭೂಮಿಯ ಮೇಲೆ ಹೇಗೆ ಋತುಚಕ್ರ ಆದಾಗ ಯಾವ ರೀತಿ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಗಳನ್ನು ಬಳಕೆ ಮಾಡುವಂತೆ ಅಲ್ಲಿಯೂ ಮಾಡಬಹುದು. ಆದರೆ ಸೀಮಿತ ನೀರಿನ ಲಭ್ಯತೆ, ಸೀಮಿತ ಶೇಖರಣೆಯಿಂದಾಗಿ ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.
ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಪಿರಿಯಡ್ಸ್ ಆದಾಗ ಏನು ಮಾಡುತ್ತಾರೆ?
Source : Smacy News
11 days ago