ಬಿಹಾರದ ಭಾಗಲ್‌ಪುರ ಜಿಲ್ಲೆಯ ಜಗತ್‌ಪುರ ಗ್ರಾಮದಲ್ಲಿ ಇಂದು (ಮಾ.20) ಬೆಳಿಗ್ಗೆ ಒಂದು ದುರಂತ ಘಟನೆ ನಡೆದಿದೆ. ಬಿಹಾರದ ನವಗಚಿಯಾದಲ್ಲಿ ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರ ಇಬ್ಬರು ಸೋದರಳಿಯರ ನಡುವೆ ಕ್ಷುಲಕ ಕಾರಣಕ್ಕೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯಲ್ಲಿ ಕೇಂದ್ರ ಸಚಿವರ ಸೋದರಳಿಯನೊಬ್ಬ ಸಾವನ್ನಪ್ಪಿದ್ದಾನೆ. ಬಿಹಾರದ ಭಾಗಲ್‌ಪುರ ಜಿಲ್ಲೆಯ ಜಗತ್‌ಪುರ ಗ್ರಾಮದಲ್ಲಿ ಇಂದು (ಮಾ.20) ಬೆಳಿಗ್ಗೆ ಒಂದು ದುರಂತ ಘಟನೆ ನಡೆದಿದೆ. ಬಿಹಾರದ ನವಗಚಿಯಾದಲ್ಲಿ ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರ ಇಬ್ಬರು ಸೋದರಳಿಯರ ನಡುವೆ ಕ್ಷುಲಕ ಕಾರಣಕ್ಕೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯಲ್ಲಿ ಕೇಂದ್ರ ಸಚಿವರ ಸೋದರಳಿಯನೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಸಹೋದರ ಮತ್ತು ತಾಯಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನೀರಿಗಾಗಿ ನಡೆದ ಜಗಳದಲ್ಲಿ ವಿಶ್ವಜಿತ್ ಮತ್ತು ಜೈಜಿತ್ ಎಂಬ ಇಬ್ಬರು ಸಹೋದರರ ನಡುವೆ ನಡೆದ ಗುಂಡಿನ ದಾಳಿಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಲ್ಲಿ, ವಿಶ್ವಜಿತ್ ಗುಂಡೇಟಿನಿಂದ ಸಾವನ್ನಪ್ಪಿದರೆ, ಜೈಜೀತ್ ಮತ್ತು ತಾಯಿ ಹಿನಾ ದೇವಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಭಾಗಲ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವಿಶ್ವಜಿತ್ ಮತ್ತು ಜಯಜಿತ್ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಸೋದರಳಿಯರು.
ನೀರಿನ ಜಗಳದಲ್ಲಿ ಕೇಂದ್ರ ಸಚಿವರ ಅಳಿಯನಿಗೆ ಗುಂಡೇಟು! ಸಹೋದರರ ನಡುವೆ ಹೊಡೆದಾಟ, ಓರ್ವನ ದುರಂತ ಅಂತ್ಯ!
Source : Smacy News
1 month ago