ತಪಾಸಣೆ ವೇಳೆ ಹಲವು ಹೋಟೆಲ್‌ಗಳಲ್ಲಿ ಅತ್ಯಂತ ಕಳಪೆ ಸ್ಥಿತಿಯಲ್ಲಿ ಆಹಾರ ತಯಾರಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ಇಲಿಗಳು ಮತ್ತು ಜಿರಳೆಗಳಂತಹ ಕೀಟಗಳು ಆಹಾರ ತಯಾರಿಕೆಯ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದು, ಸರಿಯಾದ ಕೀಟ ನಿಯಂತ್ರಣಕ್ರಮಗಳಿಲ್ಲದಿರುವುದು ಮತ್ತು ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುತ್ತಿರುವುದು ಗಂಭೀರ ಸಮಸ್ಯೆಗಳಾಗಿ ಗುರುತಿಸಲ್ಪಟ್ಟಿವೆ. ಬೆಂಗಳೂರು: ರಾಜ್ಯಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರ ತಯಾರಿಕಾ ಘಟಕಗಳಲ್ಲಿ ಅಸುರಕ್ಷಿತ ಹಾಗೂ ಅನೈರ್ಮಲ್ಯದ ಆಹಾರ ತಯಾರಿಕೆಯ ಆರೋಪದ ಮೇಲೆ ಆಹಾರ ಸುರಕ್ಷತೆ ಇಲಾಖೆ ತೀವ್ರ ಕ್ರಮ ಕೈಗೊಂಡಿದೆ. ಈ ಬಾರಿ ಆಹಾರ ಇಲಾಖೆಯ ಅಧಿಕಾರಿಗಳು ಕೀಟ ನಿಯಂತ್ರಣ ಕ್ರಮಗಳ ತಪಾಸಣೆಯೊಂದಿಗೆ ಸಮಗ್ರ ದಾಳಿಗಳನ್ನು ನಡೆಸಿದ್ದು, ಹಲವು ಹೋಟೆಲ್‌ಗಳಲ್ಲಿ ಇಲಿಗಳು, ಜಿರಳೆಗಳಂತಹ ಕೀಟಗಳ ಉಪಸ್ಥಿತಿಯನ್ನು ಪತ್ತೆಹಚ್ಚಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅನೈರ್ಮಲ್ಯದ ಜೊತೆಗೆ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯೂ ಹೆಚ್ಚಾಗಿ ಕಂಡುಬಂದಿದೆ. 479 ಹೋಟೆಲ್‌ಗಳ ಮೇಲೆ ದಾಳಿ ಆಹಾರ ಇಲಾಖೆಯು ಮಾರ್ಚ್ 12, 2025 ರಿಂದ ರಾಜ್ಯಾದ್ಯಂತ 479 ಹೋಟೆಲ್‌ಗಳನ್ನು ತಪಾಸಣೆಗೆ ಒಳಪಡಿಸಿದೆ. ಈ ತಪಾಸಣೆಯಲ್ಲಿ 174 ಹೋಟೆಲ್‌ಗಳು ಅನೈರ್ಮಲ್ಯದೊಂದಿಗೆ ಆಹಾರ ತಯಾರಿಸುತ್ತಿರುವುದು ಕಂಡುಬಂದಿದ್ದು, ಇವುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದರ ಜೊತೆಗೆ, ಕೆಲವು ಹೋಟೆಲ್‌ಗಳ ಮೇಲೆ ದಂಡಾಸ್ತ್ರವನ್ನೂ ಪ್ರಯೋಗಿಸಲಾಗಿದೆ. ಈವರೆಗೆ ಒಟ್ಟು 62,000 ರೂಪಾಯಿ ದಂಡವನ್ನು ಈ 174 ಅನೈರ್ಮಲ್ಯ ಹೋಟೆಲ್‌ಗಳಿಗೆ ವಿಧಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೋಟೆಲ್‌ಗಳ ಮೇಲೆ ತಪಾಸಣೆ ನಡೆಯುವ ಸಾಧ್ಯತೆ ಇದೆ.
Food Department: ಹೋಟೆಲ್, ರೆಸ್ಟೋರೆಂಟ್ ಪ್ರಿಯರಿಗೆ ಬಿಗ್ ಶಾಕ್! ನೀವು ತಿನ್ನುವ ಆಹಾರ ಎಷ್ಟು ಡೇಂಜರಸ್ ಗೊತ್ತಾ?
Source : Smacy News
3 days ago