ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ 7.7 ತೀವ್ರತೆಯ ಭೂಕಂಪ: ಕಟ್ಟಡದೊಳಗೆ ಸಿಲುಕಿದ 43 ಮಂದಿ
ಬ್ಯಾಂಕಾಕ್: ಮ್ಯಾನ್ಮಾರ್ ಕೇಂದ್ರಬಿಂದುವಾಗಿ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಿಂದ 10 ಕಿ.ಮೀ ದೂರ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದು 43 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಮತ್ತು ವೈದ್ಯರು ತಿಳಿಸಿದ್ದಾರೆ. ಬಲವಾದ ಭೂಕಂಪದಿಂದ ನಗರವು ನಲುಗಿಹೋಗಿದೆ.
ಥಾಯ್ ರಾಜಧಾನಿಯ ಉತ್ತರದಲ್ಲಿರುವ ಕಟ್ಟಡವು ಕೆಲವೇ ಸೆಕೆಂಡುಗಳಲ್ಲಿ ಉರುಳಿಬಿದ್ದಿವೆ. ಇಂದು ಮಧ್ಯಾಹ್ನ ಸಾಗೈಂಗ್ ನಗರದ ವಾಯುವ್ಯಕ್ಕೆ 7.7 ತೀವ್ರತೆಯ ಕಂಪನವು ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಕೆಲವೇ ನಿಮಿಷಗಳ ನಂತರ ಅದೇ ಪ್ರದೇಶದಲ್ಲಿ 6.4 ತೀವ್ರತೆಯ ನಂತರದ ಭೂಕಂಪ ಮತ್ತೆ ಸಂಭವಿಸಿತು. ಥಾಯ್ ಅಧಿಕಾರಿಗಳು ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ತಿಳಿಸಿದ್ದಾರೆ.