ಅಮೆರಿಕದಂಥ ಮುಂದುವರಿದ ರಾಷ್ಟ್ರಗಳು ಸೀಕ್ರೆಟ್ ಆಪರೇಷನ್ ಮಾಡೋವಾಗ ಹೇಗೆ ಸಂದೇಶ ಹಂಚಿಕೊಳ್ತಾರೆ? ಈ ಸಿನಿಮಾಗಳಲ್ಲಿ ನೋಡಿರೋ ಹಾಗೇ ಸ್ಯಾಟಲೈಟ್ ಫೋನ್ ಬಳಸ್ತಾರಾ? ಅಥವಾ ಪ್ರತ್ಯೇಕ ಅಪ್ಲಿಕೇಷನ್ ಬಳಸಿಕೊಳ್ತಾರಾ? ಒಂದು ವೇಳೆ ನಾವು ಬಳಸುವ ತಂತ್ರಾಂಶವನ್ನ ಯಾರಿಂದಲೂ ಹ್ಯಾಕ್ ಮಾಡೋಕೆ ಆಗಲ್ವ? ಬಹುಶಃ ಇದೆಲ್ಲವೂ ಹಾಲಿವುಡ್‌ನ ಥ್ರಿಲ್ಲರ್ ಸಿನಿಮಾಗಳಲ್ಲಿ ನಡೆಯುತ್ತೆ. ವಾಸ್ತವದಲ್ಲಿ ಅಮೆರಿಕದ (America) ಭದ್ರತಾ ಅಧಿಕಾರಿಗಳು ವಿದೇಶಿ ನೆಲದಲ್ಲಿ ನಡೆಸೋಕೆ ಹೊರಟಿದ್ದ ಕಾರ್ಯಾಚರಣೆಗಳ ಬಗ್ಗೆ ʻಸಿಗ್ನಲ್ʼ (Signal App) ಅನ್ನೋ ಮೆಸೇಜಿಂಗ್ ಆ್ಯಪ್‌ನಲ್ಲಿ ಚರ್ಚೆ ಮಾಡ್ಕೊಂಡಿದ್ದಾರೆ. ಅಂಥದ್ದೇ ಒಂದು ಚರ್ಚೆ ಲೀಕ್ ಆಗಿರೋದು ಅಮೆರಿಕದ ಭದ್ರತಾ ಅಧಿಕಾರಿಗಳು, ಮುಖ್ಯಸ್ಥರನ್ನು ತಲೆ ತಗ್ಗಿಸುವಂತೆ ಮಾಡಿದೆ. ಈಗ ಜಗತ್ತಿನಾದ್ಯಂತ ಚರ್ಚೆಯ ಕೇಂದ್ರ ವಸ್ತು ಆಗಿರೋದು ‘ಸಿಗ್ನಲ್’ ಮೆಸೆಜಿಂಗ್ ಆ್ಯಪ್. ವಾಟ್ಸಪ್, ಟೆಲಿಗ್ರಾಂ ರೀತಿನೇ ಇದೇ ಕೂಡ ಒಂದು ಮೆಸೆಜಿಂಗ್ ಅಪ್ಲಿಕೇಷನ್. ಆದ್ರೆ, ಇದರಲ್ಲಿ ಖಾಸಗಿತನಕ್ಕೆ ಧಕ್ಕೆಯಿಲ್ಲ ಎನ್ನುತ್ತಾರೆ. ಬಹುಶಃ ಇದೇ ಕಾರಣಕ್ಕೆ ಅಮೆರಿಕದ ಭದ್ರತಾ ಅಧಿಕಾರಿಗಳನ್ನು ಅಷ್ಟೊಂದು ನಂಬಿದ್ದು ಅನಿಸುತ್ತೆ. ಆದಾಗ್ಯೂ ದೊಡ್ಡ ದಾಳಿಯ ಮಾಹಿತಿ ಲೀಕ್ ಆಗಿದ್ದು ಹೇಗೆ ಅನ್ನೋದ್ರ ಬಗ್ಗೆ ಸ್ವಲ್ಪ ಗಮನಿಸಬೇಕು.
ಹೌತಿ ಉಗ್ರರ ದಾಳಿಗೆ ನಡೆದಿದ್ದ ಮಹಾ ಪ್ಲ್ಯಾನ್ ಲೀಕ್ ಆಗಿದ್ದು ಹೇಗೆ? – ಟ್ರಂಪ್ ಟೀಂ ಬಳಸಿದ್ದ ʻಸಿಗ್ನಲ್ʼ ಎಷ್ಟು ಸೇಫ್?
Source : Smacy News
1 day ago