ಬೆಳಗ್ಗೆ 8 ಗಂಟೆ ಸಮಯ.. ಆ ಮನೆಯಲ್ಲಿದ್ದ ಜನ ಎಂದಿನಂತೆ ಎದ್ದು ಕೆಲಸದಲ್ಲಿ ತೊಡಗಿಕೊಂಡಿದ್ರು. ಈ ವೇಳೆಯೇ ಎಂಟ್ರಿ ಕೊಟ್ಟಿದ್ದ ಒಬ್ಬ ಭಯಾನಕ ಅತಿಥಿ.. ಬಳಿಕ ಆ ಅತಿಥಿಯನ್ನ ಅವರೆಲ್ಲ ಮನೆಯಲ್ಲೇ ಕೂಡಿ ಹಾಕಿದ್ದಾರೆ. ಆ ಸುದ್ದಿ ಕೇಳಿ ಇಡೀ ಏರಿಯಾವೇ ಬೆಚ್ಚಿ ಬಿದ್ದಿದೆ. ಹಾಗಿದ್ರೆ ಆಗಿದ್ದೇನು? ಮನೆಗೆ ಬಂದ ಆ ಭಯಾನಕ ಅತಿಥಿ ಯಾರು? ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ. ಬೆಂಗಳೂರು, (ಏಪ್ರಿಲ್ 03): ಬೆಳ್ಳಂಬೆಳಗ್ಗೆ ಎದ್ದು ಮನೆ ಬಾಗಿಲು ತೆರೆದರೆ ಹಾಲು, ನ್ಯೂಸ್ ಪೇಪರ್, ಏರಿಯಾ ಜನ ಓಡಾಡುವುದು ಕಾಣಿಸುತ್ತೆ. ಆದರೆ ಬಾಗಿಲು ತೆರೆದಿದ್ದ ಮನೆಯೋಳಗೆ ಚಿರತೆ (leopard ) ನುಗ್ಗಿದ್ರೆ ಹೇಗಿರುತ್ತೆ. ಇದನ್ನ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಈ ಘಟನೆ ನೆನಸಿಕೊಂಡರೆ ಮೈಜುಮ್ಮೆನ್ನಿಸುತ್ತೆ. ಹೌದು…ಬೆಂಗಳೂರಿನ (Bengaluru) ಜಿಗಣಿಯ ಕುಂಟ್ಲುರೆಡ್ಡಿ ಲೇಔಟ್ನ ಮನೆಯೊಂದರಲ್ಲಿ ಬೆಳಗ್ಗೆ ಚಿರತೆ ನುಗ್ಗಿದೆ. ವೆಂಕಟೇಶ್ ಎಂಬುವವರು ಇಂದು (ಏಪ್ರಿಲ್ 03) ಬೆಳಗ್ಗೆ ಎದ್ದ ಕೂಡಲೇ ಅವರಿಗೆ ಚಿರತೆ ಕಣ್ಣಿಗೆ ಬಿದ್ದಿದೆ. ಇದರಿಂದ ಬೆಚ್ಚಿಬಿದ್ದ ವೆಂಕಟೇಶ್ ದಂಪತಿ, ಕೂಡಲೇ ಎದ್ದು ಮನೆಯಿಂದ ಆಚೆ ಬಂದು ಬಾಗಿಲು ಲಾಕ್ ಮಾಡಿದ್ದಾರೆ. ಈ ಮೂಲಕ ವೆಂಕಟೇಶ್ ಧೈರ್ಯ ಪ್ರದರ್ಶಿಸಿದ್ದಾರೆ. ಮನೆಯಲ್ಲಿ ವೆಂಕಟೇಶ್ ಮತ್ತವರ ಪತ್ನಿ ವೆಂಕಟಲಕ್ಷ್ಮೀ ಮತ್ತು ಪುತ್ರ ನಿಖಿಲ್ ವಾಸವಿದ್ದರು. ಇವತ್ತು ಬೆಳಗ್ಗೆ 8 ಗಂಟೆ ಸುಮಾರಿಗೆ ವೆಂಕಟೇಶ್ ಪತ್ನಿ ಜೊತೆ ಇರುವಾಗಲೇ ಚಿರತೆ ಎಂಟ್ರಿ ಕೊಟ್ಟಿತ್ತು. ಚಿರತೆ ಬಂದಿದ್ದನ್ನ ಗಮನಿಸಿದ ವೆಂಕಟೇಶ್ ಒಂದು ಕ್ಷಣ ಭಯಬೀತರಾಗಿದ್ರು. ಆದ್ರೆ ವಿಚಲಿತರಾಗಲಿಲ್ಲ, ಸಮಯಪ್ರಜ್ಞೆ ತೋರಿದ ವೆಂಕಟೇಶ್, ಮನೆಯಿಂದ ಪತ್ನಿಯನ್ನ ಹೊರಗೆ ಕರೆತಂದು ಮನೆ ಬಾಗಿಲನ್ನ ಲಾಕ್ ಮಾಡಿದ್ದಾರೆ. ಇದರಿಂದ ಚಿರತೆ ಮನೆಯೊಳಗೆ ಲಾಕ್ ಆಗಿದ್ದು, ಬಳಿಕ ಪೊಲೀಸರು ಹಾಗೂ ಅರಣ್ಯ ಇಲಾಖೆಹಗೆ ಮಾಹಿತಿ ನೀಡಿದ್ದಾರೆ.
ಮನೆಗೆ ನುಗ್ಗಿದ ಚಿರತೆ.. ಡೋರ್ ಲಾಕ್ ಮಾಡಿ ಆಚೆ ಬಂದ ದಂಪತಿ: ಮುಂದೇನಾಯ್ತು?
Source : Smacy News
1 day ago