South India's No.1 Digital Mobile Paper
LIVE
Welcome to Smacy Media

ಹೇಜಲ್‌ವುಡ್ ಜೀವನಶ್ರೇಷ್ಠ ಬೌಲಿಂಗ್;‌ ದ.ಆಫ್ರಿಕಾ ವಿರದ್ದದ ಡರ್ಬನ್‌ ಟೆಸ್ಟ್‌ ಗೆದ್ದ ಆಸೀಸ್

ಹೇಜಲ್‌ವುಡ್ ಜೀವನಶ್ರೇಷ್ಠ ಬೌಲಿಂಗ್;‌ ದ.ಆಫ್ರಿಕಾ ವಿರದ್ದದ ಡರ್ಬನ್‌ ಟೆಸ್ಟ್‌ ಗೆದ್ದ ಆಸೀಸ್

ಡರ್ಬನ್: ಹಲವು ಕಾರಣ‌ಗಳಿಂದ ಅತ್ಯಂತ ಮಹತ್ವ ಪಡೆದಿದ್ದ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಕಮಿನ್ಸ್‌ ನೇತೃತ್ವದ ತಂಡವು ಗೆದ್ದುಬೀಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 214 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಡರ್ಬನ್‌ನಲ್ಲಿ ನಡೆದ ಪಂದ್ಯದ ಅಂತಿಮ ದಿನದಂದು, ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 319 ರನ್‌ಗಳ ಬೃಹತ್ ಗುರಿ ನೀಡಲಾಗಿತ್ತು. ಆದರೆ ಹರಿಣಗಳ ತಂಡವು 206 ರನ್‌ ಗೆ ಆಲೌಟಾಯಿತು.

ಏಡೆನ್ ಮಾರ್ಕ್ರಮ್ ಹೋರಾಟ ನಡೆಸಿದರಾದರೂ, ಜೋಶ್‌ ಹೇಜಲ್‌ವುಡ್ ಅವರ ಉತ್ತಮ ಬೌಲಿಂಗ್‌ ಕಾರಣದಿಂದ ಆಸೀಸ್‌ ತಂಡವು ಗೆಲುವು ತನ್ನದಾಗಿಸಿಕೊಂಡಿತು. 49 ರನ್‌ ನೀಡಿ 6 ವಿಕೆಟ್‌ ಪಡೆದ ಜೋಶ್ ಹೇಜಲ್‌ವುಡ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಅಂಕಿಅಂಶ ದಾಖಲಿಸಿದರು.

ಮಾರ್ಕ್ರಮ್‌ ಹೊರತುಪಡಿಸಿ ಡೇವಿಡ್ ಬೆಡಿಂಗ್‌ಹ್ಯಾಮ್ 46 ರನ್‌ ಗಳಿಸಿ ಅಲ್ಪ ಪ್ರತಿರೋಧ ತೋರಿದರು. ವಿಯಾನ್‌ ಮುಲ್ಡರ್‌ 29 ರನ್‌ ಮತ್ತು ಮಾರ್ಕೊ ಎನ್ಸನ್‌ 35 ರನ್‌ ಮಾಡಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ನವೆಂಬರ್ 2024ರ ಬಳಿಕ ತವರಿನಲ್ಲಿ ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ದಕ್ಷಿಣ ಆಫ್ರಿಕಾಕ್ಕೆ ಇದು ಮೊದಲ ಸೋಲಾಗಿದೆ. 2006ರ ನಂತರ ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ಆಸ್ಟ್ರೇಲಿಯಾ ಗಳಿಸಿದ ಸತತ ನಾಲ್ಕನೇ ಟೆಸ್ಟ್ ಗೆಲುವು ಇದಾಗಿದೆ.

ಆಫ್ರಿಕಾ ನಾಯಕ ಟೆಂಬ ಬವುಮಾ ನಾಯಕನಾಗಿ ಮೊದಲ ಟೆಸ್ಟ್‌ ಸೋಲು ಕಂಡರು. ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಬವುಮಾ ಹೊಂದಿದ್ದಾರೆ. ಒಟ್ಟು 13 ಟೆಸ್ಟ್‌ ಪಂದ್ಯಗಳಲ್ಲಿ ದ.ಆಫ್ರಿಕಾವನ್ನು ಮುನ್ನಡೆಸಿರುವ ಬವುಮಾ 11 ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಮೊದಲ ಸೋಲು ಇದೀಗ ಡರ್ಬನ್‌ ನಲ್ಲಿ ಬಂದಿದೆ.

📍 Chennai
📰 Udayavani
🕒 17 days ago

Related News

ಜಾಗತಿಕ ತೈಲ ಪೂರೈಕೆಗೆ ತೊಡಕು: ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತ ಕಳವಳ
ಜಾಗತಿಕ ತೈಲ ಪೂರೈಕೆಗೆ ತೊಡಕು: ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತ ಕಳವಳ
Today's Motivation
Today's Motivation
Daily Calender
Daily Calender
⬅ Back
➕ Post Ad
To Ads ➡