South India's No.1 Digital Mobile Paper
LIVE
Welcome to Smacy Media

ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!

ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!

ಇಸ್ಲಮಾಬಾದ್:‌ ಹಾಂಕಾಂಗ್‌ ಸಿಕ್ಸಸ್‌ 2026ರಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡವು ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದ ನಂತರ, ತಮ್ಮ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾದರು.

ಎಕ್ಸ್ ವೇದಿಕೆಯಲ್ಲಿ ಶರೀಫ್ ಹಂಚಿಕೊಂಡ ಸಂಭ್ರಮಾಚರಣೆಯ ಪೋಸ್ಟ್ ಅನೇಕ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಸಾಂಪ್ರದಾಯಿಕ ಕ್ರಿಕೆಟ್ ಸ್ಪರ್ಧೆಗಿಂತ ಹೆಚ್ಚಾಗಿ ಮನರಂಜನಾ ಕಾರ್ಯಕ್ರಮವೆಂದು ಪರಿಗಣಿಸಲ್ಪಡುವ 'ಆರು ಆಟಗಾರರ ಪಂದ್ಯಾವಳಿ'ಯ (six-a-side tournament) ಗೆಲುವನ್ನು ಪಾಕಿಸ್ತಾನ ಸರ್ಕಾರವು ಇಷ್ಟೊಂದು ದೊಡ್ಡ ವಿಷಯವನ್ನಾಗಿ ಮಾಡುತ್ತಿರುವುದೇಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಭಾರತದ ವಿರುದ್ಧ ಪಾಕಿಸ್ತಾನ ಎದುರಿಸಿದ ಕಠಿಣ ಸನ್ನಿವೇಶಗಳ ಕಾರಣದಿಂದ ಅಭಿಮಾನಿಗಳು ಖಾರವಾಗಿ ಟೀಕೆ ಮಾಡಿದ್ದಾರೆ. ಉಭಯ ದೇಶಗಳ ನಡುವಿನ ದೊಡ್ಡ ಪೈಪೋಟಿಯನ್ನು ಉಲ್ಲೇಖಿಸಿದ ಅಭಿಮಾನಿಗಳು, ಕ್ರಿಕೆಟ್‌ನ ಸಂಕ್ಷಿಪ್ತ ಮಾದರಿಯೊಂದರಲ್ಲಿ ಸಿಕ್ಕ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯನ್ನು ಲೇವಡಿ ಮಾಡಿದರು. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಮಾನ್ಯತೆ ಇಲ್ಲದ ಮಾದರಿಯ ಟೂರ್ನಿಯೊಂದರ ಫಲಿತಾಂಶಕ್ಕಾಗಿ ದೇಶದ ಅತ್ಯುನ್ನತ ರಾಜಕೀಯ ನಾಯಕ ಅಭಿನಂದನಾ ಸಂದೇಶ ನೀಡುವ ಅಗತ್ಯವಿತ್ತೇ ಎಂದು ಕೆಲವರು ಪ್ರಶ್ನಿಸಿದರು.

ಪ್ರಧಾನಿ ಶರೀಫ್ ಅವರು 'ಎಕ್ಸ್' ವೇದಿಕೆಯಲ್ಲಿ ತಂಡದ ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಪ್ರಯತ್ನಗಳನ್ನು ಗುರುತಿಸಿದರು.

📍 Chennai
📰 Udayavani
🕒 1 day ago

Related News

‘ಸ್ಟಿಂಗ್‘ಗೆ ಎಚ್‌ಡಿಕೆ ಮನೆ ಬಳಕೆ, ಆರೋಪಿಗಳಿಂದ ಮಾಹಿತಿ: ಸೀಮಾಂತ್ ಕುಮಾರ್
‘ಸ್ಟಿಂಗ್‘ಗೆ ಎಚ್‌ಡಿಕೆ ಮನೆ ಬಳಕೆ, ಆರೋಪಿಗಳಿಂದ ಮಾಹಿತಿ: ಸೀಮಾಂತ್ ಕುಮಾರ್
Today's Motivation
Today's Motivation
Daily Calender
Daily Calender
⬅ Back
➕ Post Ad
To Ads ➡