South India's No.1 Digital Mobile Paper
LIVE
Welcome to Smacy Media

‘ಸ್ಟಿಂಗ್‘ಗೆ ಎಚ್‌ಡಿಕೆ ಮನೆ ಬಳಕೆ, ಆರೋಪಿಗಳಿಂದ ಮಾಹಿತಿ: ಸೀಮಾಂತ್ ಕುಮಾರ್

‘ಸ್ಟಿಂಗ್‘ಗೆ ಎಚ್‌ಡಿಕೆ ಮನೆ ಬಳಕೆ, ಆರೋಪಿಗಳಿಂದ ಮಾಹಿತಿ: ಸೀಮಾಂತ್ ಕುಮಾರ್

ಬೆಂಗಳೂರು: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ವಿರುದ್ಧ ನಡೆದ ‘ಸ್ಟಿಂಗ್‌’ ಕಾರ್ಯಾಚರಣೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ‘ಸ್ಟಿಂಗ್‌’ ವಿಡಿಯೊ ಅಪ್‌ಲೋಡ್‌ ಮಾಡಲು ಬಳಸಿದ ಮೊಬೈಲ್ ಫೋನ್‌ ಅನ್ನು ನವದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲೇ ಆರೋಪಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ನಗರ ‍ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಈ ಸಂಬಂಧ ಅಕ್ಟೋಬರ್ 24ರಂದು ಸಿಸಿಬಿ ಪೊಲೀಸರು ನವದೆಹಲಿಯಲ್ಲಿ ಆರೋಪಿ ರಿತೇಶ್‌ ಪಾಂಡೆ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಈ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದ್ದಾರೆ.

‘ಪ್ರಕರಣದಲ್ಲಿ ರಿತೇಶ್ ಪಾಂಡೆ ಮಾತ್ರವಲ್ಲದೆ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ ಎಂಬವರು ಭಾಗಿಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯಂತೆ ವಿನೋದ್ ಶರ್ಮಾ ಮತ್ತು ರಿತೇಶ್ ಪಾಂಡೆ ನವದೆಹಲಿಯ ಕರೋಲ್‌ ಬಾಗ್‌ ಪ್ರದೇಶದಲ್ಲಿರುವ ಮಾರುಕಟ್ಟೆಯಲ್ಲಿ ಮೊಬೈಲ್ ಫೋನ್‌ಗಳನ್ನು ಖರೀದಿ ಮಾಡಿದ್ದರು. ಖರೀದಿಸಿದ ಫೋನ್‌ಗಳನ್ನು ತಂದು ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲೇ ಪ್ರಜ್ವಲ್ ಪ್ರಸಾದ್‌ಗೆ ಹಸ್ತಾಂತರಿಸಲಾಗಿತ್ತು ಎಂಬುದನ್ನು ವಿಚಾರಣೆ ವೇಳೆ ರಿತೇಶ್ ಪಾಂಡೆ ತಿಳಿಸಿದ್ದಾರೆ’ ಎಂದು ಸಿಂಗ್ ಮಾಹಿತಿ ನೀಡಿದರು.

ಹಣಕಾಸು ವಹಿವಾಟು: ‘ಪ್ರಕರಣದ ಮುಂದಿನ ತನಿಖೆಗಾಗಿ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.

📍 Chennai
📰 Prajavani
🕒 20 hrs ago

Related News

Today's Motivation
Today's Motivation
Daily Calender
Daily Calender
ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!
ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!
⬅ Back
➕ Post Ad
To Ads ➡