South India's No.1 Digital Mobile Paper
LIVE
Welcome to Smacy Media

ಬರ ಅವಧಿಯಲ್ಲಿ ರೈತರಿಗೆ ಮೇವಿನ ಬೀಜದ ಕಿಟ್‌ ವಿತರಣೆಗೆ ₹25 ಕೋಟಿ ಬಿಡುಗಡೆ

ಬರ ಅವಧಿಯಲ್ಲಿ ರೈತರಿಗೆ ಮೇವಿನ ಬೀಜದ ಕಿಟ್‌ ವಿತರಣೆಗೆ ₹25 ಕೋಟಿ ಬಿಡುಗಡೆ

ರಾಜ್ಯದ ಬರಪೀಡಿತ ತಾಲೂಕುಗಳ ಕುರಿತಂತೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಪ್ರಸ್ತುತ ಬರ ಪರಿಸ್ಥಿತಿ, ಬೆಳೆ ನಷ್ಟದ ಮಾಹಿತಿ ಸೇರಿದಂತೆ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಜಿಲ್ಲಾಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆಯವರು ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 151 ಲಕ್ಷ ಟನ್‌ಗಳಷ್ಟು ಮೇವಿನ ಸಂಗ್ರಹವಿದೆ. ಇದು 33 ವಾರಗಳಿಗೆ ಸಾಕಾಗುತ್ತದೆ. 49 ತಾಲ್ಲೂಕುಗಳಲ್ಲಿ 25 ವಾರಗಳಿಗೆ ಹಾಗೂ 18 ತಾಲ್ಲೂಕುಗಳಲ್ಲಿ 20 ವಾರಗಳಿಗಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಇದರ ನಡುವೆ ನೀರಿನ ಆಸರೆ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ನೀಡಲು ₹25 ಕೋಟಿ ಗಳನ್ನು ಬಿಡುಗಡೆ ಮಾಡಿದ್ದೇವೆ. ಕೆಎಂಎಫ್ ಕಡೆಯಿಂದಲೂ ಕಿಟ್‌ಗಳನ್ನು ನೀಡುತ್ತಿದ್ದೇವೆ. ಮೇವು ಬೆಳೆದ ರೈತರು ಅದನ್ನು ಜೋಪಾನ ಮಾಡಬೇಕೆಂದು ವಿನಂತಿಸಿದ್ದೇವೆ ಎಂದು ತಿಳಿಸಿದರು.

📍 Mysore
📰 Udayavani
🕒 16 days ago

Related News

ಮಹಾರಾಷ್ಟ್ರದಲ್ಲಿ ಆಟೋ, ಕ್ಯಾಬ್ ಚಾಲಕರಿಗೆ ಮರಾಠಿ ಕಲಿಯಲು ಮತ್ತೊಂದು ವರ್ಷ ಗಡುವು
ಮಹಾರಾಷ್ಟ್ರದಲ್ಲಿ ಆಟೋ, ಕ್ಯಾಬ್ ಚಾಲಕರಿಗೆ ಮರಾಠಿ ಕಲಿಯಲು ಮತ್ತೊಂದು ವರ್ಷ ಗಡುವು
ನೇಪಾಲ ಪ್ರವಾಹದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ತುರ್ತು ಕ್ರಮ: ಸಚಿವ ಜೈಶಂಕರ್
ನೇಪಾಲ ಪ್ರವಾಹದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ತುರ್ತು ಕ್ರಮ: ಸಚಿವ ಜೈಶಂಕರ್
Nepal floods: 80 ಯಾತ್ರಿಕರು ನಾಪತ್ತೆ, ಭಾವುಕರಾದ ಸದ್ಗುರು; ಈಶಾ ಶಿಬಿರದಲ್ಲಿ ನೀರವ ಮೌನ
Nepal floods: 80 ಯಾತ್ರಿಕರು ನಾಪತ್ತೆ, ಭಾವುಕರಾದ ಸದ್ಗುರು; ಈಶಾ ಶಿಬಿರದಲ್ಲಿ ನೀರವ ಮೌನ
Back
Post Ad
To Ads