ಒಲಿಂಪಿಕ್ಸ್ ಕ್ರೀಡೆಗಳಲ್ಲಿ ದೇಶದ ಪ್ರಾತಿನಿಧ್ಯ ಕಡಿಮೆ: ಬೇಸರ ವ್ಯಕ್ತಪಡಿಸಿದ ಮೋದಿ
ನವದೆಹಲಿ: ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಯಲ್ಲಿರುವ ಅರ್ಧಕ್ಕೂ ಹೆಚ್ಚು ಕ್ರೀಡೆಗಳಲ್ಲಿ ಭಾರತದ ಪ್ರಾತಿನಿಧ್ಯ ಇಲ್ಲದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಪಾಲ್ಗೊಳ್ಳದ ಸರ್ಫಿಂಗ್, ಸ್ಪೋರ್ಟ್ಸ್ ಕ್ಲೈಂಬಿಂಗ್‌ನಂಥ ಸ್ಪರ್ಧೆಗಳಲ್ಲಿ ಪಾಲ್ಗೊಂಡರಷ್ಟೇ ಪದಕ ಪಟ್ಟಿಯಲ್ಲಿ ದೇಶ ಸುಧಾರಣೆ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟರು.