South India's No.1 Digital Mobile Paper
LIVE
Welcome to Smacy Media

ಪಶ್ಚಿಮ ಘಟ್ಟ ವರದಿ ಚರ್ಚೆಗೆ ವಿಶೇಷ ಅಧಿವೇಶನ: ಸಿಎಂ ಡಿ.ಕೆ.ಶಿವಕುಮಾರ್

ಪಶ್ಚಿಮ ಘಟ್ಟ ವರದಿ ಚರ್ಚೆಗೆ ವಿಶೇಷ ಅಧಿವೇಶನ: ಸಿಎಂ ಡಿ.ಕೆ.ಶಿವಕುಮಾರ್

ಈ ಕುರಿತು ಚರ್ಚಿಸಲಿಕ್ಕಾಗಿಯೇ ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಗೃಹ ಕಚೇರಿ "ಕೃಷ್ಣಾ'ದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಒಂದೊಂದು ರಾಜ್ಯಗಳಿಗೆ ಒಂದೊಂದು ನಿಯಮ ಮಾಡಿರುವ ಮಾಹಿತಿ ಇದೆ. ಹಾಗಾಗಿ ವಿಶೇಷ ಅಧಿವೇಶನದ ಮೂಲಕ ನಿರ್ಣಯ ಕೈಗೊಳ್ಳುವುದರ ಜತೆಗೆ ಕಾನೂನು ಚೌಕಟ್ಟಿನಲ್ಲಿ ಮುಂದಿನ ಹೆಜ್ಜೆ ಇಡುವುದರ ಬಗ್ಗೆಯೂ ಚರ್ಚೆ ನಡೆದಿದೆ' ಎಂದರು.

ಆಕ್ಷೇಪಣೆಗಳನ್ನು ಸಲ್ಲಿಸಲು 2 ತಿಂಗಳ ಕಾಲಾವಕಾಶ ಇದೆ. ಅದಕ್ಕೂ ಮೊದಲೇ ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗುವುದು. ಎಲ್ಲ ಶಾಸಕರ ಅಭಿ ಪ್ರಾಯಗಳನ್ನು ಕ್ರೋಡೀಕರಿಸಿ, ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲು ಉದ್ದೇಶಿಸ ಲಾಗಿದೆ. ಈಗಾಗಲೇ ಆ ಭಾಗದ ಶಾಸಕ ರಿಗೂ ಸ್ಥಳೀಯವಾಗಿ ಜನಾಭಿಪ್ರಾಯ ಸಂಗ್ರ ಹಿಸುವುದು, ಅರಿವು ಮೂಡಿಸುವ ಕೆಲಸ ಮಾಡಲು ಸೂಚಿಸಲಾಗಿದೆ' ಎಂದರು.

"ಕರಾವಳಿ ಮತ್ತು ಮಲೆನಾಡು ಸಹಿತ 10 ಜಿಲ್ಲೆಗಳ 33 ತಾಲೂಕಿನ 1,449 ಗ್ರಾಮಗಳು ಈ ವ್ಯಾಪ್ತಿಗೆ ಬರುತ್ತವೆ. ಅಂದಾಜು 20,668 ಚದರ ಕಿ.ಮೀ. ಪ್ರದೇಶವನ್ನು ಹೊಂದಿದೆ. ಈ ಭಾಗದಲ್ಲಿನ ಜನರ ಜೀವನೋಪಾಯಕ್ಕೆ ತೀವ್ರ ತೊಂದರೆ ಉಂಟಾಗಲಿದೆ. ಇದನ್ನು ಮನಗಂಡು 2024ರ ಸೆ. 26ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೇ ಕರಡು ಅಧಿಸೂ ಚನೆ ತಿರಸ್ಕರಿಸಿದ್ದೆವು ಎಂದು ಹೇಳಿದರು.

"ಅದರ ಹೊರತಾಗಿಯೂ ಕೇಂದ್ರ ಸರಕಾರ ಈಗ ಏಕಪಕ್ಷೀಯವಾಗಿ ಮತ್ತೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಕಠಿನ ನಿರ್ಬಂಧಗಳನ್ನು ಸೇರಿಸಲಾಗಿದೆ. ಇದರಿಂದ ಟೌನ್‌ಶಿಪ್‌, ಪ್ರವಾಸೋದ್ಯಮ, ಕೃಷಿ, ಗ್ರಾಮರಸ್ತೆ ಹೀಗೆ ಎಲ್ಲದಕ್ಕೂ ತೊಂದರೆ ಆಗಲಿದೆ. ಆದ್ದರಿಂದ ಪಕ್ಷಾತೀತವಾಗಿ ಇದನ್ನು ನಾವು ವಿರೋಧಿಸಬೇಕಾಗಿದೆ. ನಮ್ಮ ವಿರೋಧ ಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಬೇಕಿದೆ ಎಂದು ಹೇಳಿದರು. ಪಕ್ಷ ಮತ್ತು ಸರಕಾರ ಕರಾವಳಿ ಮತ್ತು ಮಲೆನಾಡು ಭಾಗದ ಜನರ ರಕ್ಷಣೆಗೆ ನಿಲ್ಲಲಿದೆ. ಮುಂದಿನ ದಿನ ಗಳಲ್ಲಿ ಈ ಕರಡು ಅಧಿಸೂಚನೆ ಬಗ್ಗೆ ಪಕ್ಷ ಮತ್ತು ಸರಕಾರ ಅಲ್ಲಿನ ಜನರಿಗೆ ಜಾಗೃತಿ ಕಾರ್ಯಕ್ರಮ ನಡೆಸಲಿದೆ ಎಂ

📍 mudichur
📰 TV9 Kannada
🕒 16 days ago

Related News

ಮಹಾರಾಷ್ಟ್ರದಲ್ಲಿ ಆಟೋ, ಕ್ಯಾಬ್ ಚಾಲಕರಿಗೆ ಮರಾಠಿ ಕಲಿಯಲು ಮತ್ತೊಂದು ವರ್ಷ ಗಡುವು
ಮಹಾರಾಷ್ಟ್ರದಲ್ಲಿ ಆಟೋ, ಕ್ಯಾಬ್ ಚಾಲಕರಿಗೆ ಮರಾಠಿ ಕಲಿಯಲು ಮತ್ತೊಂದು ವರ್ಷ ಗಡುವು
ನೇಪಾಲ ಪ್ರವಾಹದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ತುರ್ತು ಕ್ರಮ: ಸಚಿವ ಜೈಶಂಕರ್
ನೇಪಾಲ ಪ್ರವಾಹದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ತುರ್ತು ಕ್ರಮ: ಸಚಿವ ಜೈಶಂಕರ್
Nepal floods: 80 ಯಾತ್ರಿಕರು ನಾಪತ್ತೆ, ಭಾವುಕರಾದ ಸದ್ಗುರು; ಈಶಾ ಶಿಬಿರದಲ್ಲಿ ನೀರವ ಮೌನ
Nepal floods: 80 ಯಾತ್ರಿಕರು ನಾಪತ್ತೆ, ಭಾವುಕರಾದ ಸದ್ಗುರು; ಈಶಾ ಶಿಬಿರದಲ್ಲಿ ನೀರವ ಮೌನ
Back
Post Ad
To Ads