ಕೇರಳ: ಆಯುರ್ವೇದ ಚಿಕಿತ್ಸೆಗೆ ಬಂದ ಕೀನ್ಯಾದ ಮಾಜಿ ಪ್ರಧಾನಿ ಹೃದಯಸ್ತಂಭನದಿಂದ ನಿಧನ
ಕೊಚ್ಚಿ: ಆಯುರ್ವೇದ ಚಿಕಿತ್ಸೆಗಾಗಿ ಕೇರಳಕ್ಕೆ ಆಗಮಿಸಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಂಡಿಗಾ, ಹೃದಯಸ್ತಂಭನದಿಂದಾಗಿ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲಾ ಒಡಿಂಗಾ ಅವರು ಆಯುರ್ವೇದ ಚಿಕಿತ್ಸೆಗಾಗಿ ಕೇರಳದ ಎರ್ನಾಕುಲಂ ಜಿಲ್ಲೆಯ ಕೂಥಾಟುಕುಳಂಗೆ ಬಂದಿದ್ದರು. ಆಯುರ್ವೇದ ಕೇಂದ್ರದ ಆವರಣದಲ್ಲಿ ಇಂದು (ಬುಧವಾರ) ಬೆಳಗಿನ ನಡಿಗೆಯ ವೇಳೆ ಒಡಿಂಗಾ ಕುಸಿದು ಬಿದಿದ್ದರು. ತಕ್ಷಣವೇ ಕೂಥಾಟುಕುಳಂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ ಸುಮಾರು 9.52ರ ಹೊತ್ತಿಗೆ ನಿಧನರಾದರು ಎಂದು ಆಯುರ್ವೇದ ಕಣ್ಣಿನ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.