ಆರೋಪಿಗಳ ಖುಲಾಸೆಗೆ ಆಕ್ರೋಶ; ಗುಜರಾತ್ ಕೋರ್ಟ್ನಲ್ಲಿ ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆದ ವ್ಯಕ್ತಿ
ಸುಮಾರು 28 ವರ್ಷಗಳ ಹಿಂದಿನ ಹಲ್ಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಗುಜರಾತ್ ನ್ಯಾಯಾಲಯ ಎತ್ತಿಹಿಡಿದ ನಂತರ ದೂರುದಾರನು ಕೋಪಗೊಂಡಿದ್ದಾನೆ. ಇದೇ ಕೋಪದಲ್ಲಿ ಅವರು ನ್ಯಾಯಮೂರ್ತಿ ಮೇಲೆ ಶೂ ಬಿಸಾಡಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ಒಳಗೆ ಶೂ ದಾಳಿ ನಡೆಸಿದ ಒಂದು ವಾರದ ನಂತರ ಅಹಮದಾಬಾದ್‌ನಲ್ಲಿ ಈ ಘಟನೆ ನಡೆದಿದೆ.