ಒಬಿಸಿ ಮೀಸಲಾತಿ ಏರಿಸಿದ್ದ ತೆಲಂಗಾಣಕ್ಕೆ ಭಾರೀ ಹಿನ್ನಡೆ – ಸುಪ್ರೀಂನಲ್ಲಿ ಅರ್ಜಿ ವಜಾ
ನವದೆಹಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಅಥವಾ ಒಬಿಸಿ ಸಮುದಾಯಗಳಿಗೆ (OBC Community) ಮೀಸಲಾತಿ ಹೆಚ್ಚಿಸಿದ್ದ ತೆಲಂಗಾಣ ಸರ್ಕಾರಕ್ಕೆ (Telangana Government) ಭಾರೀ ಹಿನ್ನಡೆಯಾಗಿದೆ.
ಒಬಿಸಿ ಮೀಸಲಾತಿ (Resevartion) ವಿಸ್ತರಿಸಿ ತಾನು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.