ಭಾರತದಿಂದ ಅವಮಾನದ ಬಳಿಕ ಪಾಕ್ ನಾಯಕನಿಗೆ ಮತ್ತೊಂದು ಆಘಾತ: ನಾಯಕತ್ವದಿಂದ ಸಲ್ಮಾನ್ ಆಘಾಗೆ ಗೇಟ್ಪಾಸ್!
ಏಷ್ಯಾಕಪ್ ಟೂರ್ನಿಯ ಫೈನಲ್ ನಲ್ಲಿ ಭಾರತ ವಿರುದ್ಧ ಸೋಲು ಹಾಗೂ ಭಾರತದಿಂದ ಅವಮಾನದ ಬಳಿಕ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾಗೆ ಮತ್ತೊಂದು ಆಘಾತ ಎದುರಾಗಿದೆ. ಸಲ್ಮಾನ್ ಅಘಾ ಬದಲಿಗೆ ಆಲ್‌ರೌಂಡರ್ ಶದಾಬ್ ಖಾನ್ ನನ್ನು ಪಾಕಿಸ್ತಾನದ ಟಿ20 ನಾಯಕರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಪಾಕಿಸ್ತಾನ ಪರ 70 ಏಕದಿನ ಮತ್ತು 112 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಶದಾಬ್, ಈ ವರ್ಷದ ಆರಂಭದಲ್ಲಿ ಲಂಡನ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಆತ ಆಟದಿಂದ ಹೊರಗುಳಿಯಬೇಕಾಯಿತು. ಆದಾಗ್ಯೂ, ಶದಾಬ್ ಈಗ ಫಿಟ್ ಆಗಿದ್ದು ಮುಂದಿನ ತಿಂಗಳು ಮರಳಬಹುದು.