ಕೊಹ್ಲಿ, ರೋಹಿತ್, ಗಿಲ್ ಬ್ಯಾಟಿಂಗ್ ವೈಫಲ್ಯ.. ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ
ಮೊದಲ ಒಡಿಐ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್ಗೆ 137 ರನ್ಗಳ ಟಾರ್ಗೆಟ್ ಅನ್ನು ಆಸ್ಟ್ರೇಲಿಯಾ ತಂಡಕ್ಕೆ ನೀಡಿದೆ. ಮಳೆ ಬಂದ ಕಾರಣ ಪಂದ್ಯವನ್ನ ಕೇವಲ 26 ಓವರ್ಗಳಿಗೆ ಮಾತ್ರ ಸೀಮಿತ ಮಾಡಲಾಗಿದೆ.
ಆಸ್ಟ್ರೇಲಿಯಾದ ಪರ್ತ್ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಆಸಿಸ್ ನಾಯಕ ಮಿಚೆಲ್ ಮಾರ್ಷ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿದ್ದು ಸಾಧಾರಣ ಮೊತ್ತದ ಟಾರ್ಗೆಟ್ ಅನ್ನು ಎದುರಾಳಿಗೆ ನೀಡಿದೆ. ಆರಂಭದಲ್ಲಿ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಶುಭ್ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಭಾರೀ ಸಮಸ್ಯೆ ಅನುಭವಿಸಿತು.