Plane Crash: ಸ್ಕಿಡ್ ಆಗಿ ರನ್‌ವೇಯಿಂದ ಸಮುದ್ರಕ್ಕೆ ಬಿದ್ದ ಕಾರ್ಗೋ ವಿಮಾನ : ಇಬ್ಬರು ಸಾವು
ರನ್‌ವೇಯಿಂದ ಸ್ಕಿಡ್ ಆಗಿ ಸಮುದ್ರಕ್ಕೆ ಬಿದ್ದ ಕಾರ್ಗೋ ವಿಮಾನ
ದುಬೈನಿಂದ ಚೀನಾದ ಹಾಂಗ್‌ಕಾಂಗ್‌ಗೆ ಹೋಗುತ್ತಿದ್ದ ಸರಕು ಸಾಗಣೆ ವಿಮಾನವೊಂದು ಲ್ಯಾಂಡಿಗ್ ವೇಳೆ ಸ್ಕಿಡ್ ಆಗಿ ಪತನಗೊಂಡು ಸಮುದ್ರಕ್ಕೆ ಬಿದ್ದಿದ್ದು, ಈ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇಯಿಂದ ಸಮುದ್ರಕ್ಕೆ ಜಾರಿ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯ ನಂತರ ತೆಗೆದ ವೀಡಿಯೋ ಫೋಟೋಗಳಲ್ಲಿ ಸರಕು ಸಾಗಣೆ ವಿಮಾನ ಬೋಯಿಂಗ್ 747 ವಿಮಾನವೂ ಏರ್‌ಪೋರ್ಟ್‌ನ ಸಮೀಪವಿರುವ ಸಮುದ್ರದಲ್ಲಿ ಭಾಗಶಃ ಮುಳುಗಿರುವುದನ್ನು ಕಾಣಬಹುದು. ಇದರಲ್ಲಿ ವಿಮಾನದ ಮೂಗು ಹಾಗೂ ಬಾಲ ಪ್ರತ್ಯೇಕಗೊಂಡಿರುವುದನ್ನು ಕಾಣಬಹುದಾಗಿದೆ.