ಮುಂಬೈ: ಪರೀಕ್ಷಾರ್ಥ ಸಂಚಾರದ ವೇಳೆ ವಾಲಿದ ಮೋನೋರೈಲು; ತಪ್ಪಿದ ಅನಾಹುತ
ಮುಂಬೈ: ಮುಂಬೈನ ವಡಾಲಾ ಡಿಪೋದಲ್ಲಿ ಬುಧವಾರ ಬೆಳಗ್ಗೆ ಪರೀಕ್ಷಾರ್ಥ ಸಂಚಾರದ ಸಮಯದಲ್ಲಿ ಮೋನೋರೈಲು ವಾಲಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರೈಲಿನೊಳಗೆ ಯಾವುದೇ ಪ್ರಯಾಣಿಕರು ಇರಲಿಲ್ಲ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋಗಳು ಮತ್ತು ವಿಡಿಯೋಗಳಲ್ಲಿ, ರೈಲು ಸ್ವಲ್ಪ ವಾಲಿರುವುದು ಕಂಡುಬಂದಿದೆ. ಇಂದು ಬೆಳಗ್ಗೆ 9 ಗಂಟೆಗೆ ಈ ಅಪಘಾತ ವರದಿಯಾಗಿದೆ. ಇಬ್ಬರು ಸಿಬ್ಬಂದಿಯನ್ನು ಮೋನೋರೈಲಿನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.