ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯಲ್ಲಿ ಗೇಟ್ ಅಳವಡಿಕೆಯ ಪೂರ್ವಭಾವಿ ಕೆಲಸ ಆರಂಭ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ ಬಹುನಿರೀಕ್ಷೆಯ ಗೇಟ್ ಬದಲಿಸುವ ಕೆಲಸಕ್ಕೆ ಶುಕ್ರವಾರದಿಂದ ಚಾಲನೆ ದೊರೆತಿದ್ದು, ಕವಚಗಳನ್ನು ತೆರವುಗೊಳಿಸುವುದು, ಕೆಲವು ಅನಗತ್ಯ ನಟ್ಟು, ಬೋಲ್ಡ್‌ಗಳನ್ನು ತೆರವುಗೊಳಿಸುವಂತಹ ಕೆಲಸಗಳು ಆರಂಭವಾಗಿವೆ.