ಮಂಡ್ಯ | ವಿ.ಸಿ.ಫಾರಂನಲ್ಲಿ ‘ಕೃಷಿ ಮೇಳ’ ಇಂದಿನಿಂದ
ಮಂಡ್ಯ: ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಮೂರು ದಿನ ಆಯೋಜಿಸಿರುವ ‘ಕೃಷಿ ಮೇಳ–2025’ ವಿ.ಸಿ.ಫಾರಂ ಸಜ್ಜಾಗಿದೆ. ಡಿ.5ರಿಂದ 7ರವರೆಗೆ ನಡೆಯಲಿರುವ ಈ ಮೇಳದಲ್ಲಿ ವಿವಿ ವ್ಯಾಪ್ತಿಯ ಐದು ಜಿಲ್ಲೆಗಳ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ.