ಐಪಿಎಲ್ ವೇಳೆಯೇ ಪಿಎಸ್‌ಎಲ್ ಟೂರ್ನಿ ಆಯೋಜನೆ: ದಿನಾಂಕ ಘೋಷಿಸಿದ ನಖ್ವಿ
ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟೂರ್ನಿಯ 11ನೇ ಆವೃತ್ತಿಯು 2026ರ ಮಾರ್ಚ್ 26 ರಿಂದ ಮೇ 3ರವರೆಗೆ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿ ಕೂಡ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಶುರುವಾಗಲಿದ್ದು, ಎರಡೂ ಟೂರ್ನಿಗಳು ಏಕಕಾಲದಲ್ಲಿ ಜರುಗಲಿವೆ.