ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ವಿಜ್ಞಾನಿಗಳ ತಂಡವು ತಮ್ಮ ಹೊಸ ಸ್ಯಾಟಲೈಟ್ ಲಾಂಚ್‌ಗೂ ಮೊದಲು ಆಂಧ್ರಪ್ರದೇಶದ ತಿರುಪತಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಇಸ್ರೋವು ಮುಂದಿನ ತಲೆಮಾರಿನ ಬಹ ಮಹತ್ವದ ಸಂವಹನ ಉಪಗ್ರಹವನ್ನು ಡಿಸೆಂಬರ್ 24ರಂದು ಶ್ರೀಹರಿಕೋಟಾದ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಉಡಾವಣೆ ಮಾಡಲಿದೆ. ಹೀಗಾಗಿ ಇದಕ್ಕೂ ಮೊದಲು ಎಲ್ಲವೂ ಸುಗಮವಾಗಿ ಸಾಗಲಿ ಎಂಬ ಪ್ರಾರ್ಥನೆಯೊಂದಿಗೆ ಇಸ್ರೋದ ವಿಜ್ಞಾನಿಗಳ ತಂಡ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.