H1-B Visa: ಅತ್ತ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ನೂರಾರು ಅನಿವಾಸಿ ಭಾರತೀಯರು: ಇತ್ತ H-1B ನಿರ್ಬಂಧ ಸಮರ್ಥಿಸಿಕೊಂಡ ಜೆಡಿ ವ್ಯಾನ್ಸ್!
ಅಮೆರಿಕದಲ್ಲಿ (America) ಕೆಲಸ ಮಾಡುತ್ತಿರುವ ಸಾವಿರಾರು ಅನಿವಾಸಿ ಭಾರತೀಯ H-1B ವೀಸಾ (H-1B Visa) ಹೊಂದಿರುವವರು ವೀಸಾ ನವೀಕರಣಕ್ಕಾಗಿ (Visa Update) ಭಾರತಕ್ಕೆ ಬಂದು ಸಿಲುಕಿಕೊಂಡಿದ್ದಾರೆ. US ಕಾನ್ಸುಲರ್ ಕಚೇರಿಗಳು ಹಠಾತ್ ಅಪಾಯಿಂಟ್‌ಮೆಂಟ್‌ಗಳನ್ನು ರದ್ದುಪಡಿಸಿ ತಿಂಗಳುಗಳ ನಂತರ ಮರು ನಿಗದಿಪಡಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ವಲಸೆ ವಕೀಲರು ತಿಳಿಸಿದ್ದಾರೆ. ಆದರೆ ಇದೀಗ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ H-1B ವೀಸಾ ಕಾರ್ಯಕ್ರಮದ ಮೇಲಿನ ನಿರ್ಬಂಧಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.