Year Ender 2025: ಈ ವರ್ಷ ಭಾರತೀಯ ಕ್ರಿಕೆಟ್ ತಂಡ ಗೆದ್ದ ಪ್ರಮುಖ ಪಂದ್ಯಾವಳಿಗಳು!
2025ನೇ ವರ್ಷವು ಭಾರತದ ಕ್ರಿಕೆಟ್ ಪಾಲಿಗೆ ಶ್ರೇಷ್ಠ ವರ್ಷಗಳಲ್ಲಿ ಒಂದಾಗಿಯೇ ನೆನಪಿನಲ್ಲಿ ಉಳಿಯುತ್ತದೆ. ಪುರುಷರ ತಂಡವು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತನ್ನದೇ ಆದ ವಿರೋಧವನ್ನು ಹೊಂದಿದ್ದರೂ, ವೈಟ್ ಬಾಲ್ ಪ್ರದರ್ಶನವು ತಂಡಕ್ಕೆ ಹೊಸ ಹುರುಪನ್ನು ನೀಡಿದೆ. ಇದರೊಂದಿಗೆ ಮಹಿಳೆಯರು ತಮ್ಮ ಮೊದಲ ಏಕದಿನ ವಿಶ್ವಕಪ್ ಅನ್ನು ಗೆಲ್ಲುವ ಮೂಲಕ ಭಾರತ ತಂಡ ಇತಿಹಾಸ ಸೃಷ್ಟಿಸಿದೆ ಮತ್ತು ಅಂಧರ T20 ವಿಶ್ವಕಪ್‌ನಲ್ಲಿಯೂ ಭಾರತದ ಮಹಿಳಾ ತಂಡವು ಮೊದಲ ವಿಜಯವನ್ನು ಆಚರಿಸಿತು.