ಬೆಂಗಳೂರು: ಬ್ಲಾಕ್‌ಸ್ಪಾಟ್ ನಿರ್ಮೂಲನೆಗೆ 'ಕಸ ಕಿಯೋಸ್ಕ್' ಆರಂಭ
ಬೆಂಗಳೂರು: ಕಸ ಸುರಿಯುವ ಕಪ್ಪು ಚುಕ್ಕೆ ಪ್ರದೇಶಗಳನ್ನು (ಬ್ಲಾಕ್‌ಸ್ಪಾಟ್) ನಿರ್ಮೂಲನೆ ಮಾಡಲು ಪಾಲಿಕೆಯು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಬ್ಲಾಕ್‌ಸ್ಪಾಟ್‌ಗಳ ನಿರ್ಮೂಲನೆಗೆ ದಿನದ ಯಾವುದೇ ಸಮಯದಲ್ಲಿ ಕಸ ನೀಡಲು ಜನರಿಗೆ ಅವಕಾಶ ಕಲ್ಪಿಸಲು ಕಿಯೋಸ್ಕ್‌ಗಳನ್ನನ ಆರಂಭಿಸಲಾಗಿದೆ.