ರಷ್ಯಾ ಸೇನೆ ಸೇರಿದ್ದ 10 ಭಾರತೀಯರು ಸಾವು, ಸೋದರ ನಾಪತ್ತೆ: ಪಂಜಾಬ್ ವ್ಯಕ್ತಿ ಅಳಲು
ಜಲಂಧರ್: ಕಾಣೆಯಾಗಿದ್ದ ಸಹೋದರನನ್ನು ಹುಡುಕುವ ಸಲುವಾಗಿ ರಷ್ಯಾಗೆ ತೆರಳಿ, ಭಾರತಕ್ಕೆ ಬರಿಗೈಯಲ್ಲಿ ವಾಪಸ್ ಆಗಿರುವ ಪಂಜಾಬ್ ವ್ಯಕ್ತಿಯೊಬ್ಬರು ಆಘಾತಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರ ಹೋರಾಡಲು ಸೇನೆಗೆ ಸೇರಿದ್ದ 10 ಮಂದಿ ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ಭಾನುವಾರ ಹೇಳಿದ್ದಾರೆ.