2025 in Review: ಬರೀ 14 ವರ್ಷ ವಯಸ್ಸಿನಲ್ಲಿಯೇ ಐಪಿಎಲ್ ಕ್ರಿಕೆಟ್ಗೆ ಎಂಟ್ರಿ; ಅಬ್ಬರಿಸಿದ ವೈಭವ್ ಸೂರ್ಯವಂಶಿ
ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಫರ್ಸ್ಟ್ ಕ್ಲಾಸ್ ಕ್ರಿಕೆಟ್ ಆಡಿ, ನಂತರ ಬಹುಬೇಗನೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಎಂಟ್ರಿ ಕೊಟ್ಟು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದ ವೈಭವ್ ಸೂರ್ಯವಂಶಿ (Vaibhav Suryavanshi) ಅವರಿಗೆ 2025 ರ ವರ್ಷ ಮರೆಯಲಾಗದ ವರ್ಷವಾಗಿದೆ. ಅದರಲ್ಲೂ ಏಪ್ರಿಲ್ 19, 2025 ಈ ದಿನವನ್ನು ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರು ಬಹುಶಃ ಅವರ ಜೀವನದಲ್ಲಿಯೇ ಎಂದಿಗೂ ಮರೆಯೋದಿಲ್ಲ.