ಐದು ತಿಂಗಳ ಮಗುವಿನ ಜೀವತೆಗೆದ ಹನಿ ನೀರು: ವಿವಾಹವಾಗಿ 10 ವರ್ಷದ ನಂತರ ಜನಿಸಿದ್ದ ಕಂದಮ್ಮ
ಭೋಪಾಲ್: ಮಗುವಿಗೆ ಕುಡಿಸುವ ಹಾಲಿಗೆ ಬೆರೆಸಿದ್ದ ನಲ್ಲಿ ನೀರು ಮಗುವಿನ ಜೀವವನ್ನೇ ತೆಗೆದಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ಕಲುಷಿತ ನೀರು ಸೇವಿಸಿ ಐದೂವರೆ ತಿಂಗಳ ಅಯಾನ್ ಎಂಬ ಮಗು ಸಹ ಸಾವನ್ನಪ್ಪಿದೆ.
ಅವ್ಯಾನ್ ಅವರ ತಂದೆ ಸುನಿಲ್ ಸಾಹು ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವರ್ಷಗಳ ಪ್ರಾರ್ಥನೆ ಮತ್ತು ಕಾಯುವಿಕೆಯ ನಂತರ ಅವರಿಗೆ ಜುಲೈನಲ್ಲಿ ಮಗು ಜನಿಸಿತ್ತು.
10 ವರ್ಷಗಳ ನಂತರ ದೇವರು ನಮಗೆ ಖುಷಿ ನೀಡಿದ್ದನು. ಬಳಿಕ, ದೇವರೇ ಅದನ್ನು ಕಸಿದಿದ್ದಾನೆ ಎಂದು ಇಂದೋರ್‌ನ ಮನೆಯ ಮೂಲೆಯೊಂದರಲ್ಲಿ ಕುಳಿತಿದ್ದ ವೃದ್ಧೆಯೊಬ್ಬರು ನೋವಿನಿಂದ ಹೇಳುತ್ತಿದ್ದರು.