ಪ್ರಶ್ನೆ: ಮಗಳು ಚೆನ್ನಾಗಿ ಓದುತ್ತಾಳೆ, ಆದರೆ ಪರೀಕ್ಷೆ ಸಮಯದಲ್ಲಿ ಎಲ್ಲಾ ಮರೆತು ಹೋಗುತ್ತಾಳೆ. ಇದಕ್ಕೆ ಏನು ಮಾಡುವುದು?
ತಜ್ಞರ ಉತ್ತರ: ಮಕ್ಕಳಿಗೆ ಮೊದಲು ಪೋಷಕರ ಒತ್ತಡ ಹಾಕಬಾರದು. ಈಗಾಗಲೇ ಬ್ಲ್ಯೂಪಿಂಟ್, ಮಾದರಿ ಪ್ರಶ್ನೆಗಳನ್ನು ಕೊಡಲಾಗಿದೆ. ಅದರಂತೆ ಅಭ್ಯಾಸ ಮಾಡಲು ಹೇಳಿ.
ಲಹರಿ, ದೊಡ್ಡಬಳ್ಳಾಪುರ
ಪ್ರಶ್ನೆ: ಪ್ರಶ್ನೆಗಳು ಯಾವ ರೀತಿ ಬರುತ್ತವೆ?
ತಜ್ಞರ ಉತ್ತರ: ಪ್ರಬಂಧದ ಪ್ರಶ್ನೆಗಳಿಗೆ ಬರೆಯುವ ಮೂಲಕ ಅಭ್ಯಾಸ ಮಾಡಿಕೊಳ್ಳಿ. ಪ್ರಶ್ನೆಗಳ ಬಗ್ಗೆ ನಿಮ್ಮ ತರಗತಿ ಶಿಕ್ಷಕರನ್ನು ಕೇಳಿ?
ಕುಲಕರ್ಣಿ, ಯಾದಗಿರಿ
ಪ್ರಶ್ನೆ: ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಏನು ಮಾಡಬೇಕು?
ತಜ್ಞರ ಉತ್ತರ: ಮಕ್ಕಳಿಗೆ ಒತ್ತಡ ಹಾಕಬಾರದು, ಓದಿನ ಬಗ್ಗೆ ಗಮನಹರಿಸಲು ಹೇಳಿದರೆ ಸಾಕು.
ಚೇತನ ಅಂಗಡಿ, ಹುಬ್ಬಳ್ಳಿ
ಪ್ರಶ್ನೆ: ಪಠ್ಯದಲ್ಲಿನ ಎಲ್ಲಾ ವಿಷಯಗಳನ್ನು ಅಭ್ಯಾಸ ಮಾಡಬೇಕೇ?
ತಜ್ಞರ ಉತ್ತರ: ಈಗಾಗಲೇ ನಾವು ವಿದ್ಯಾರ್ಥಿಗಳಿಗೆ ಬ್ಲ್ಯೂಪಿಂಟ್, ಮಾದರಿ ಪ್ರಶ್ನೆಗಳನ್ನು ಕೊಡಲಾಗಿದೆ. ಅದರಂತೆ ಅಭ್ಯಾಸ ಮಾಡಬೇಕು
ಮಹಮದ್ ಪೈಯಾಜ್:, ಚಿತ್ತಾಪೂರ
ಪ್ರಶ್ನೆ: ಪರೀಕ್ಷೆ ಯಾವ ರೀತಿ ಇರುತ್ತದೆ.
ತಜ್ಞರ ಉತ್ತರ: ಪೂರ್ವ ಸಿದ್ಧತೆ ಪರೀಕ್ಷೆಯ ಮಾದರಿಯಲ್ಲೆ ಪರೀಕ್ಷೆ ಇರಲಿದೆ. ಮಾಡೆಲ್ ಪ್ರಶ್ನೆ ಪ್ರತಿಕೆಗಳನ್ನು ಅಭ್ಯಾಸ ಮಾಡಿ.
ಮದನ್ ಸಿಂಗ್: ಮಾಂಟೆಸರಿ ಶಾಲೆ; ಹೊಸಕೋಟೆ
ಪ್ರಶ್ನೆ: ಪರೀಕ್ಷೆ ಯಾವ ರೀತಿ ಇರುತ್ತದೆ.
ತಜ್ಞರ ಉತ್ತರ: ಪೂರ್ವ ಸಿದ್ಧತೆ ಪರೀಕ್ಷೆಯ ಮಾದರಿಯಲ್ಲೆ ಪರೀಕ್ಷೆ ಇರಲಿದೆ. ಮಾಡೆಲ್ ಪ್ರಶ್ನೆ ಪ್ರತಿಕೆಗಳನ್ನು ಅಭ್ಯಾಸ ಮಾಡಿ.
ಮಾಲಿನಿ ( ವಿದ್ಯಾರ್ಥಿನಿ), ಧಾರವಾಡ
ಪ್ರಶ್ನೆ: ಸಮಾಜದ ಬ್ಯೂಪ್ರಿಂಟ್ ಪರೀಕ್ಷೆ ಬಗ್ಗೆ ಗೊಂದಲವಿದೆ.
ತಜ್ಞರ ಉತ್ತರ: ಈಗಾಲೇ ಪರೀಕ್ಷೆ ಬರೆದು ಅಭ್ಯಾಸ ಮಾಡಿಕೊಂಡಿದ್ದೀರಿ. ಶಿಕ್ಷಕರನ್ನು ಕೇಳಿ, ಗೊಂದಲ ಪರಿಹರಿಸಿಕೊಳ್ಳಿ
ಶ್ವೇತಾ ( ವಿದ್ಯಾರ್ಥಿನಿ), ಧಾರವಾಡ
ಪ್ರಶ್ನೆ: ಪಠ್ಯವನ್ನು ನೆನಪಿಟ್ಟುಕೊಳ್ಳುದು ಹೇಗೆ?
ತಜ್ಞರ ಉತ್ತರ: ಪೂರ್ವ ಸಿದ್ಧತೆ ಪರೀಕ್ಷೆ ಬರೆದಿದ್ದೀರಿ, ಭಯ ಪಡೆದೇ ಅದರಂತೇ ಪರೀಕ್ಷೆ ಬರೆಯಬೇಕು
12:51
21 Feb 2026
ಮೇಘಾನಂದ ( ವಿದ್ಯಾರ್ಥಿನಿ ಪೋಷಕರು): ನ್ಯಾಮತಿ
ಪ್ರಶ್ನೆ: ಮಕ್ಕಳು ಭಯ ಪಡದೇ ಪರೀಕ್ಷೆ ಬರೆಯಬಹುದೇ?
ತಜ್ಞರ ಉತ್ತರ: ಖಂಡಿತವಾಗಿ ಬರಯಬಹುದು, ಮಕ್ಕಳಿಗೆ ಒತ್ತಡ ಹಾಕಬಾರದು ಅರ್ಪಿತ್ ಸಿಂಗ್: ಮಾಂಟೆಸರಿ ಶಾಲೆ; ಹೊಸಕೋಟೆ
ಪ್ರಶ್ನೆ: ಮಾಡೆಲ್ ಪ್ರಶ್ನೆಪತ್ರಿಕೆಗಳಲ್ಲಿ ಪ್ರಶ್ನೆಗಳು ಬರಬಹುದೇ?
ತಜ್ಞರ ಉತ್ತರ: ಶೇ. 80 ರಷ್ಟು ಬರಬಹುದು.
ಪ್ರಶ್ನೆ: ಪರೀಕ್ಷೆ ಕೇಂದ್ರಕ್ಕೆ ಏನೇನು ತೆಗೆದುಕೊಂಡು ಹೋಗಬೇಕು ( ವಿದ್ಯಾರ್ಥಿ ತಾಯಿ: ಜಯಶ್ರೀ) ತಜ್ಞರ ಉತ್ತರ: ಆಲ್ ಟಿಕೆಟ್ ಮತ್ತು ಪೆನ್ನುಗಳು ಇದ್ದರೆ ಸಾಕು
12:41
21 Feb 2026
SSLC, PU ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸುವುದು ಹೇಗೆ? ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರಾದ ಪ್ರಕಾಶ್ ನಿಟ್ಟಾಲಿ, ನಿರ್ದೇಶಕರಾದ ಎಚ್.ಎನ್. ಗೋಪಾಲಕೃಷ್ಣ ಅವರಿಂದ ಮಾಹಿತಿ.
ಪ್ರಜಾವಾಣಿ ಫೋನ್ ಇನ್: SSLC, PU ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸುವುದು ಹೇಗೆ?
1 hour ago