... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಮತ್ತೊಮ್ಮೆ ರಾಜ್ಯಸಭೆಗೆ ಹೋಗ್ತಾರಾ ಮಾಜಿ ಪ್ರಧಾನಿ ದೇವೇಗೌಡ್ರು?: ಪ್ರಧಾನಿ ಮೋದಿ ಅಭಿಲಾಷೆ ಏನು?

ಮತ್ತೊಮ್ಮೆ ರಾಜ್ಯಸಭೆಗೆ ಹೋಗ್ತಾರಾ ಮಾಜಿ ಪ್ರಧಾನಿ ದೇವೇಗೌಡ್ರು?: ಪ್ರಧಾನಿ ಮೋದಿ ಅಭಿಲಾಷೆ ಏನು?

ಮಾಜಿ ಪ್ರಧಾನಿ ದೇವೇಗೌಡರ ರಾಜ್ಯಸಭೆ ಅವಧಿ ಕೆಲವೇ ತಿಂಗಳಲ್ಲಿ ಮುಕ್ತಾಯವಾಗಲಿದೆ. ವಯಸ್ಸಿನ ಕಾರಣ, ರಾಜ್ಯಸಭೆ ಮರು ಪ್ರವೇಶಕ್ಕೆ ದೇವೇಗೌಡ್ರು ಹಿಂದೇಟು ಹಾಕಿದ್ರು.. ಆದ್ರೀಗ ಮೋದಿ ಮನವೊಲಿಕೆಯಿಂದ ಮಾಜಿ ಪ್ರಧಾನಿ ರಾಜ್ಯಸಭೆಗೆ ಮತ್ತೆ ಆಯ್ಕೆ ಆಗೋದು ಬಹುತೇಕ ಖಚಿತವಾಗಿದೆ. ಇದರಿಂದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಥಾನ ಕಳೆದುಕೊಳ್ಳಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಮ್ಮೆ ರಾಜ್ಯಸಭೆಗೆ ಹೋಗ್ತಾರಾ ಮಾಜಿ ಪ್ರಧಾನಿ ದೇವೇಗೌಡ್ರು? ಪ್ರಧಾನಿ ಮೋದಿ ಅಭಿಲಾಷೆ.. ಬಿಜೆಪಿಗೆ ಕೈ ತಪ್ಪುತ್ತಾ ರಾಜ್ಯಸಭೆ ಸ್ಥಾನ? ಹೆಚ್​.ಡಿ. ದೇವೇಗೌಡರು.. ಭಾರತದ ಮಾಜಿ ಪ್ರಧಾನಿ.. ಇವರು ಪ್ರಧಾನಿ ಆಗಿದ್ದಾಗ ನಡೆಸಿದ ಆಡಳಿತ ವೈಖರಿ.. 

ಇಂದಿಗೂ ಅದೆಷ್ಟೋ ರಾಜಕಾರಣಿಗಳಿಗೆ ಮಾದರಿಯಾಗಿದೆ. ಪ್ರಧಾನಿ ಮೋದಿ ಕೂಡ.. ಆಡಳಿತದ ವಿಚಾರದಲ್ಲಿ ದೇವೇಗೌಡರ ಸಲಹೆಗಳನ್ನು ಕೇಳಿದ್ದೂ ಇದೆ. ಸದ್ಯ ದೇವೇಗೌಡರ ರಾಜ್ಯಸಭೆ ಸದಸ್ಯ ಸ್ಥಾನ ಅವಧಿ ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಆದ್ರೀಗ ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆಗೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ದೇವೇಗೌಡರು ವಯಸ್ಸಿನ ಕಾರಣದಿಂದ ಮತ್ತೊಮ್ಮೆ ರಾಜ್ಯಸಭೆಗೆ ಪ್ರವೇಶ ಬೇಡ ಎಂಬ ನಿರ್ಧಾರ ಮಾಡಿದ್ರು.. ಆದ್ರೆ ಇತ್ತೀಚೆಗೆ ಬಜೆಟ್​ ಅಧಿವೇಶನದ ವೇಳೆ ದೇವೇಗೌಡ್ರು ಪ್ರಧಾನಿಯನ್ನು ಭೇಟಿ ಆಗಿದ್ದರು. ಆಗ, ಹೆಚ್.ಡಿ.ದೇವೇಗೌಡರಿಗೆ ನೀವು ರಾಜ್ಯಸಭೆಯಲ್ಲಿ ಇರಲೇಬೇಕೆಂದು ಪ್ರಧಾನಿ ಮೋದಿ ಮನವೊಲಿಕೆ ಮಾಡಿದ್ದಾರೆ. ಹೀಗಾಗಿ ಮೋದಿ ಅಭಿಲಾಷೆಯಂತೆ.. ಮಾಜಿ ಪ್ರಧಾನಿ ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಆಗೋದು ಬಹುತೇಕ ಖಚಿತ ಎಂಬ ಮಾತು ಮೈತ್ರಿ ಪಡೆಯಲ್ಲಿ ಕೇಳಿ ಬರ್ತಿದೆ. ಮೋದಿ ಮಾತಿನ ಮೇರೆಗೆ ರಾಜ್ಯಸಭೆಗೆ ದೇವೇಗೌಡರ ಆಯ್ಕೆ ಆಗೋದು ನಿಶ್ಚಿತ.. ಇದರಿಂದಾಗಿ ಈ ಬಾರಿ ಬಿಜೆಪಿ ಸ್ಥಾನ ಕಳೆದುಕೊಳ್ಳಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಗೆ ಕೈ ತಪ್ಪುತ್ತಾ ರಾಜ್ಯಸಭೆ ಸ್ಥಾನ? ಜೂನ್ 30ರಂದು ದೇವೇಗೌಡರ ರಾಜ್ಯಸಭಾ ಸದಸ್ಯ ಸ್ಥಾನ ಅಂತ್ಯ ಇದೇ ಜುಲೈ‌ನಲ್ಲಿ ಮತ್ತೆ ನಡೆಯಲಿರುವ ರಾಜ್ಯಸಭಾ ಚುನಾವಣೆ ರಾಜ್ಯಸಭೆಗೆ ಆಯ್ಕೆಯಾಗಲು ಬೇಕಾಗಿರುವುದು 45 ಮತಗಳು ಬಿಜೆಪಿ ಬಳಿ ಹಾಲಿ 65 ಶಾಸಕರು, ಜೆಡಿಎಸ್ ಪಕ್ಷದಲ್ಲಿ 18 ಮತಗಳಿವೆ ಮೈತ್ರಿ ಅಂತ HDD ಮಣೆ ಹಾಕಿದ್ರೆ, ಬಿಜೆಪಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಸದ್ಯ ನಾಲ್ಕು ಸ್ಥಾನದ ಪೈಕಿ ಎರಡು ಸ್ಥಾನಗಳು ಬಿಜೆಪಿ ಪಕ್ಷಕ್ಕೆ ಇದೆ ಈಗ ಮೈತ್ರಿಯಲ್ಲಿ ಶಾಸಕರ ಸಂಖ್ಯೆಯಲ್ಲಿ ಇಳಿಮುಖ ಆಗಿದ್ದು ಸಂಕಷ್ಟ BJP - JDS ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಕಣಕ್ಕಿಳಿದ್ರೆ ಕಷ್ಟ ಆಗ ಬಿಜೆಪಿ ಪಕ್ಷ ಯಾರನ್ನೂ ಕೂಡ ಕಣಕ್ಕಿಳಿಸಲು ಸಾಧ್ಯವಿಲ್ಲ ಪ್ರಧಾನಿ ಮೋದಿ ಮಾತು ಪಾಲಿಸಬೇಕಾಗಿರುವುದರಿಂದ ಬಿಜೆಪಿಗೆ ಕಷ್ಟ

Source : News First

2 hours ago

Home Flash News