‘ನನ್ನ ಬೆಸ್ಟ್ ಫ್ರೆಂಡ್ ಈಗ ಹೆಂಡತಿ..’ ರಶ್ಮಿಕಾರ ಕಂಗಳು ತುಂಬಿದ ಫೋಟೋ ವೈರಲ್..!
ಟಾಲಿವುಡ್‌ನ ಬಹುನಿರೀಕ್ಷಿತ ತಾರಾಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇದೀಗ ಅಧಿಕೃತವಾಗಿ ಸತಿ-ಪತಿಯಾಗಿದ್ದಾರೆ. ನಿನ್ನೆ ರಾಜಸ್ಥಾನದ ಉದಯಪುರದಲ್ಲಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಟಾಲಿವುಡ್‌ನ ಬಹುನಿರೀಕ್ಷಿತ ತಾರಾಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇದೀಗ ಅಧಿಕೃತವಾಗಿ ಸತಿ-ಪತಿಯಾಗಿದ್ದಾರೆ. ನಿನ್ನೆ ರಾಜಸ್ಥಾನದ ಉದಯಪುರದಲ್ಲಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಮದುವೆಯ ಬೆನ್ನಲ್ಲೇ ನವಜೋಡಿ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಮದುವೆಯ ಅಧಿಕೃತ ಫೋಟೋಗಳನ್ನು (Official Wedding Pictures) ಹಂಚಿಕೊಂಡಿದ್ದು, ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿವೆ.
ವಿಜಯ್ ದೇವರಕೊಂಡ ಅವರು ರಶ್ಮಿಕಾ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಅತ್ಯಂತ ಭಾವುಕವಾಗಿ ಹಾಗೂ ಮುದ್ದಾಗಿ ಬರೆದುಕೊಂಡಿದ್ದಾರೆ. ಒಂದು ದಿನ ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಂಡೆ. ಅವಳು ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎನಿಸಿತು. ಊಟ ಮಾಡುವಾಗ ಅವಳು ನನ್ನ ಎದುರು ಕುಳಿತಿದ್ದರೆ ಆ ಊಟಕ್ಕೆ ಮತ್ತಷ್ಟು ಅರ್ಥವಿರುತ್ತಿತ್ತು. ವರ್ಕೌಟ್ ಮಾಡುವಾಗ ಅವಳಿದ್ದರೆ ಅದು ಶಿಕ್ಷೆಯಂತೆ ಕಾಣದೆ ಮೋಜಿನಿಂದ ಕೂಡಿರುತ್ತಿತ್ತು ಎನಿಸಿತು. ನಾನು ಎಲ್ಲೇ ಇದ್ದರೂ, ನನಗೆ ಮನೆಯೆಂಬ ನೆಮ್ಮದಿ ಮತ್ತು ಶಾಂತಿ ಸಿಗಲು ಅವಳು ಬೇಕೇ ಬೇಕು ಎನಿಸಿತು. ಹಾಗಾಗಿ, ನಾನು ನನ್ನ ಬೆಸ್ಟ್ ಫ್ರೆಂಡ್ ಅನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ... 26.02.2026 ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.