... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಜೋರಾಯ್ತು ಡಿನ್ನರ್​ ಪಾಲಿಟಿಕ್ಸ್​! ಬೆಂಬಲಿಗರಿಗೆ ಖಡಕ್​ ಸಂದೇಶ ಕೊಟ್ರು ಡಿಸಿಎಂ ಡಿಕೆ ಶಿವಕುಮಾರ್​

DK Shivakumar: ಜೋರಾಯ್ತು ಡಿನ್ನರ್​ ಪಾಲಿಟಿಕ್ಸ್​! ಬೆಂಬಲಿಗರಿಗೆ ಖಡಕ್​ ಸಂದೇಶ ಕೊಟ್ರು ಡಿಸಿಎಂ ಡಿಕೆ ಶಿವಕುಮಾರ್​

ಬೆಂಗಳೂರು (ಫೆ.27): ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಕೋಲಾಹಲ ಸೃಷ್ಟಿಸುವ ಲಕ್ಷಣ ಕಾಣ್ತಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar)​​ ಬಣಗಳು ಆ್ಯಕ್ಟಿವ್ ಆಗಿದೆ. ಮಾಗಡಿ ಶಾಸಕ ಎಚ್​ಸಿ ಬಾಲಕೃಷ್ಣ (Balakrishna) ಹುಟ್ಟುಹಬ್ಬದ ನೆಪದಲ್ಲಿ ಗುರುವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಡಿಕೆಶಿ ಬೆಂಬಲಿಗರು ಡಿನ್ನರ್ ಮೀಟಿಂಗ್ ಆಯೋಜಿಸೋ ಮೂಲಕ ವಿದೇಶಿ ಪ್ರವಾಸಕ್ಕೆ ಸೆಡ್ಡು ಹೊಡೆದಿದ್ದಂತೆ ಕಾಣ್ತಿದೆ. ಇತ್ತ ಮೀಟಿಂಗ್ ಪಾಲಿಟಿಕ್ಸ್​ ಬಗ್ಗೆ ಮಾತಾಡಿದ ಡಿಕೆ ಶಿವಕುಮಾರ್ (DK Shivakumar) ಅವರು ಬೆಂಬಲಿಗರಿಗೆ ಖಡಕ್​ ಸಂದೇಶ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಅಂತ ಬೆಂಬಲಿಗ ಶಾಸಕರು ಹೇಳ್ತಿದ್ದು, ಈ ಬಗ್ಗೆ ಕೆಲ ಶಾಸಕರು ಗುರುವಾರ ಸಭೆ ಸೇರಿ ಚರ್ಚೆ ಮಾಡ್ತಿದ್ದಾರೆ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್​, ನನಗೆ ಅದರ ಬಗ್ಗೆ ಗೊತ್ತಿಲ್ಲ. ನನ್ನ ಹತ್ರ ಅವರು ಯಾರು ಬಂದು ಮಾತಾಡಿಲ್ಲ. ಅವ್ರು ಬಂದು ಮಾತಾಡಲಿ ಆಮೇಲೆ ಮಾತಾಡ್ತೀನಿ ಎನ್ನುತ್ತಾ ಬೆಂಬಲಿಗರಿಗೆ ಕಿವಿ ಮಾತೊಂದನ್ನ ಹೇಳಿದ್ದಾರೆ.
ಡಿಕೆಶಿ ಸಿಎಂ ಆಗ್ಬೇಕು ಇದಕ್ಕಾಗಿ ನಾವು ದೆಹಲಿಗೆ ಹೋಗಲು ರೆಡಿ ಎಂದು ಬೆಂಬಲಿಗರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವ್ರು. ನನ್ನ ಪರವಾಗಿ ಯಾರು ದೆಹಲಿಗೆ ಹೋಗೋದು ಬೇಡ. ದಯವಿಟ್ಟು ಯಾರು ನನ್ನ ಪರ ಹೋಗಿ ಮಾತಾಡೋದು ಬೇಡಿ ಎಂದು ಬೆಂಬಲಿಗರಿಗೆ ಡಿಕೆಶಿ ಸಂದೇಶ ನೀಡಿದ್ದಾರೆ.

Source : News18 Kannada

1 hour ago

Home Flash News