... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಬೆಂಗಳೂರು ಏರ್‌ಪೋರ್ಟ್‌ ವಿಶ್ವದಲ್ಲೇ ಬೆಸ್ಟ್‌: ಅರೈವಲ್ಸ್‌ನಲ್ಲಿ ಸತತ 4ನೇ ವರ್ಷ ಈ ಬಿರುದು

ಬೆಂಗಳೂರು ಏರ್‌ಪೋರ್ಟ್‌ ವಿಶ್ವದಲ್ಲೇ ಬೆಸ್ಟ್‌: ಅರೈವಲ್ಸ್‌ನಲ್ಲಿ ಸತತ 4ನೇ ವರ್ಷ ಈ ಬಿರುದು

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್‌ (ACI) ನಿಂದ ಸತತ ನಾಲ್ಕನೇ ವರ್ಷವೂ 'ಅತ್ಯುತ್ತಮ ಆಗಮಸ್ಥಾನ' ಪ್ರಶಸ್ತಿಗೆ ಪಾತ್ರವಾಗಿದೆ. ವೇಗ, ಸೌಕರ್ಯ ಮತ್ತು ಉತ್ತಮ ಅನುಭವ ನೀಡಲು ಸಿಬ್ಬಂದಿ ಹಾಗೂ ಪಾಲುದಾರರ ಸಾಮೂಹಿಕ ಬದ್ಧತೆ  ತನ್ನ ಕಾರ್ಯಕ್ಷಮತೆಯಿಂದ ಹಲವು ಬಾರಿ ವಿವಿಧ ದಾಖಲೆಗಳನ್ನು ನಿರ್ಮಿಸಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸತತ 4ನೇ ವರ್ಷವೂ ‘ಅತ್ಯುತ್ತಮ ಆಗಮಸ್ಥಾನ’ (ಅರೈವಲ್ಸ್‌) ಎಂಬ ದಾಖಲೆಗೆ ಪಾತ್ರವಾಗಿದೆ.   

ವಿಮಾನದಿಂದ ಇಳಿದ ಕ್ಷಣದಿಂದ ನಾವು ಉತ್ತಮ ಅನುಭವ ನೀಡಲು ಶ್ರಮಿಸುತ್ತೇವೆ. ಇದರ ಫಲವಾಗಿ ದೊರಕಿರುವ ಪ್ರಶಸ್ತಿಯು ನಮ್ಮ ಕಾರ್ಯನಿರ್ವಹಣೆಯ ಸ್ಥಿರತೆ, ಸಿಬ್ಬಂದಿ ಮತ್ತು ಪಾಲುದಾರರ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಗಿರೀಶ್‌ ನಾಯರ್‌ ತಿಳಿಸಿದರು. ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಸೇವೆ, ಸೌಕರ್ಯ, ಅನುಕೂಲತೆ ಮತ್ತು ಸ್ವಚ್ಛತೆಯ ಮಾನದಂಡಗಳ ಬಗ್ಗೆ ಪ್ರಯಾಣಿಕರು ನೀಡುವ ಪ್ರತಿಕ್ರಿಯೆ, ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಜಾಗತಿಕವಾಗಿ ಪ್ರಮಾಣೀಕೃತ ಸಮೀಕ್ಷೆಗಳ ಮೂಲಕ ಅಳೆದು, ಅದರ ಆಧಾರದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. 2022ರಿಂದ ಇದು ಬೆಂಗಳೂರು ವಿಮಾನನಿಲ್ದಾಣದ ಪಾಲಾಗುತ್ತಿದೆ.

Source : Asianet News

1 hour ago

Home Flash News