ತನ್ನ ನೆರೆಹೊರೆಯ ದೇಶಗಳಿಗೆ ಕ್ಷಮೆ ಕೇಳಿದ ಇರಾನ್ : ದಾಳಿ ನಡೆಸಿದ್ದಕ್ಕೆ ಈಗ ಕ್ಷಮೆಯಾಚನೆ
ಇರಾನ್ ದೇಶವು ತನ್ನ ನೆರೆಹೊರೆಯ ದೇಶಗಳ ಮೇಲೆಯೇ ದಾಳಿ ನಡೆಸಿತ್ತು. ಈಗ ಇದಕ್ಕಾಗಿ ತನ್ನ ನೆರೆಹೊರೆಯ ದೇಶಗಳ ಕ್ಷಮೆಯಾಚಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜಿಸ್ ಕಿಯಾನ್ ನೆರೆಹೊರೆಯ ದೇಶಗಳಿಗೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ. ಆ ದೇಶಗಳಿಂದ ನಮ್ಮ ಮೇಲೆ ದಾಳಿ ನಡೆದಿದ್ದರಿಂದ ದಾಳಿ ನಡೆಸಬೇಕಾಯ್ತು ಎಂದಿದ್ದಾರೆ. ಇರಾನ್ ಇಂದು ತನ್ನ ನೆರೆಹೊರೆಯ ದೇಶಗಳಿಗೆ ಕ್ಷಮೆ ಕೇಳಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜಿಸ್ ಕಿಯಾನ್ ನೆರೆಹೊರೆಯ ದೇಶಗಳಿಗೆ ಕ್ಷಮೆ ಕೇಳಿದ್ದಾರೆ. ಅಮೆರಿಕಾ, ಇಸ್ರೇಲ್ ವಿರುದ್ಧದ ದಾಳಿ ವೇಳೆ ನೆರೆಹೊರೆಯ ದೇಶಗಳ ಮೇಲೆಲ್ಲಾ ಇರಾನ್ ದಾಳಿ ನಡೆಸಿತ್ತು. ಇದಕ್ಕಾಗಿ ಈಗ ಇರಾನ್ ದೇಶವು ಕ್ಷಮೆ ಕೇಳಿದ್ದು, ಆ ದೇಶಗಳಿಂದ ನಮ್ಮ ಮೇಲೆ ದಾಳಿ ನಡೆಸಿದ್ದರಿಂದ ದಾಳಿ ನಡೆಸಬೇಕಾಯಿತು ಎಂದಿದೆ.
ಇರಾನ್ ದೇಶಕ್ಕೆ ನೆರೆಹೊರೆಯ ದೇಶಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡುವ ಉದ್ದೇಶ ಇಲ್ಲ. ನಾನು ಕ್ಷಮೆ ಕೇಳುತ್ತೇನೆ. ಇರಾನ್ ನಿಂದ ದಾಳಿಗೊಳಗಾದ ನೆರೆಹೊರೆಯ ದೇಶಗಳಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜಿಸ್ ಕಿಯಾನ್ ಹೇಳಿದ್ದಾರೆ. ಈ ಹೇಳಿಕೆಯನ್ನು ಇರಾನ್ ಸರ್ಕಾರಿ ಟಿವಿ ಚಾನಲ್ ನಲ್ಲಿ ಪ್ರಸಾರ ಮಾಡಲಾಗಿದೆ. ಇರಾನ್ ದೇಶ ನೆರೆಹೊರೆಯ ದೇಶಗಳಿಂದ ತನ್ನ ಮೇಲೆ ದಾಳಿ ನಡೆಯದೇ ಇದ್ದರೇ, ಆ ದೇಶಗಳ ಮೇಲೆ ದಾಳಿ ಮಾಡಬಾರದು ಎಂಬ ನೀತಿ ಅಳವಡಿಸಿಕೊಂಡಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜಿಸ್ ಕಿಯಾನ್ ಹೇಳಿದ್ದಾರೆ.