ಮೂರು ತಿಂಗಳ ಬಳಿಕ ಎಸಿಎಫ್‌ಗಳಿಗೆ ಹುದ್ದೆ ನೀಡಿದ ರಾಜ್ಯ ಸರ್ಕಾರ
ಬೆಂಗಳೂರು: ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಮೂರು ತಿಂಗಳಿನಿಂದ ಮೊದಲ ಹುದ್ದೆಗೆ ಕಾಯುತ್ತಿದ್ದ , ಅರಣ್ಯ ಇಲಾಖೆಯ 22 ಮಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ(ಎಸಿಎಫ್) ರಾಜ್ಯ ಸರ್ಕಾರ ಕೊನೆಗೂ ಹುದ್ದೆ ನೀಡಿದೆ. ವೇತನವೂ ಇಲ್ಲವೇ ಕೆಲಸವೂ ಇಲ್ಲದೇ ಅರಣ್ಯ ಇಲಾಖೆಯಲ್ಲಿ ಕುಳಿತಿದ್ದ ಎಸಿಎಫ್‌ಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎಸಿಎಫ್ ಹುದ್ದೆಗಳನ್ನು ನೀಡಲಾಗಿದೆ. ಈ ಕುರಿತು ಪ್ರಜಾವಾಣಿ ಡಿಜಿಟಲ್ ವರದಿ ಪ್ರಕಟಿಸಿತ್ತು.
ಪಿ.ಐಶ್ವರ್ಯ(ಎಸಿಎಫ್ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ರಬ್ಬರ್ ವಿಭಾಗ ಸುಳ್ಯ),.
ಸಂದೀಪ ಕಮ್ಮಾರ( ಎಸಿಎಫ್, ಮಲೈಮಹದೇಶ್ವರ ವನ್ಯಜೀವಿ, ಚಾಮರಾಜನಗರ), ಹಸ್ತ ಶೆಟ್ಟಿ( ಎಸಿಎಫ್ ಅರಣ್ಯ ಸಂಚಾರಿ ದಳ, ಹಾಸನ), ಲತಾ ಗುರುಭಟ್ಟ( ಎಸಿಎಫ್, ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ರಬ್ಬರ್ ವಿಭಾಗ ಸುಬ್ರಹ್ಮಣ್ಯ), ಎನ್.ಮಂಜುನಾಥ( ವಿಶೇಷ ಹುಲಿ ಸಂರಕ್ಷಣಾ ಕಾರ್ಯಪಡೆ ಬಂಡೀಪುರ), ಎಂ,ಮಹಾಲಕ್ಷ್ಮಿ( ಯಳಂದೂರು ವನ್ಯಜೀವಿ ಉಪವಿಭಾಗ, ಬಿಆರ್‌ಟಿ), ಮಹೇಶ ಖಾತೇದಾರ(ಆನೆ ಕಾರ್ಯಪಡೆ ಕೊಳ್ಳೇಗಾಲ),. ಪಿ.ಕೆ.ನೇಹಾ( ಪಿಲಿಕುಳ ಜೈವಿಕ ಉದ್ಯಾನ, ಮಂಗಳೂರು). ಮಂಜುನಾಥ ಸಿದ್ದಪ್ಪ ನಿಲಜಗಿ( ಸಾಮಾಜಿಕ ಅರಣ್ಯ ವಿಭಾಗ ಕಲ್ಬು ರ್ಗಿ), ಕೆ.ಟಿ.ಉಮಾ( ಅರಣ್ಯ ಅಪರಾಧ ನಿಯಂತ್ರಣ ಕೋಶ, ಎಪಿಸಿಸಿಎಫ್ ಕಚೇರಿ (ಜಾಗೃತ) ಬೆಂಗಳೂರು), ಶಿವಾನಂದ ಹನಮಂತ ಜಿಡ್ಡಿಮನಿ( ಕೃಷ್ಣ ಭಾಗ್ಯ ಜಲ ನಿಗಮ, ರೋಡಲಬಂಡಾ), ಆರ್.ಶ್ರೀನಿವಾಸ( ಆನೆ ಕಾರ್ಯಪಡೆ ರಾಮನಗರ), ಮಹಾಲಕ್ಷ್ಮಿ ಕ್ಯಾತಪ್ಪ ಕೋರಣ್ಣವರ( ಸಂಶೋಧನೆ ಉಪವಿಭಾಗ, ಸಕಲೇಶಪುರ), ಬಿ.ಬಿ.ರಾಜೇಶ್ವರಿ (ಡಿಎಲ್‌ಡಿಬಿ ವಿಜಯಪುರ).
ಎಚ್.ಮೇಘನಾ(ಅರಣ್ಯ ಸಂಚಾರಿ ದಳ ಧಾರವಾಡ),. ಎಂ.ಅನುಷಾ(ಬನ್ನೇರುಘಟಟ ಜೈವಿಕ ಉದ್ಯಾನ,. ಬೆಂಗಳೂರು). ಕೆ.ಉಮಾಪತಿ( ಆನೆ ಕಾರ್ಯಪಡೆ, ಹಾಸನ),, ಭಾಗ್ಯಶ್ರೀ ಬಿರಾದಾರ(ಸಾಮಾಜಿಕ ಅರಣ್ಯ ಉಪವಿಭಾಗ, ವಿಜಯಪುರ), ಜೆ.ನವ್ಯಶ್ರೀ( ಅರಣ್ಯ ತರಬೇತಿ ಕೇಂದ್ರ ಕಾಡುಗೋಡಿ,. ಬೆಂಗಳೂರು),. ಎಂ.ಸಿಂಧೂ( ಅರಣ್ಯ ಸಂಚಾರಿ ದಳ, ಚಿಕ್ಕಮಗಳೂರು). ಎಸ್.ಪಿ.ಕಾವ್ಯ( ಕಾರ್ಯಯೋಜನೆ, ಚಿಕ್ಕಮಗಳೂರು). ಮಂಜುನಾಥ( ಆನೆ ಕಾರ್ಯಪಡೆ, ಕೊಡಗು)
ಕಾಯುತ್ತಿದ್ದವರಿಗೆ ಸಿಕ್ಕಿತು ಆದೇಶ: ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ನಿತ್ಯ ಸಹಿ ಹಾಕುವುದು ಬಿಟ್ಟರೆ, ಅವರಿಗೆ ಬೇರೇನೂ ಕೆಲಸ ಇರಲಿಲ್ಲ. ಸರ್ಕಾರ ಹುದ್ದೆ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಅವರು ಕಚೇರಿಗೆ ಬಂದು ಹೋಗುತ್ತಿದ್ದರು.